ತಿಳುವಿನ ತಳ
ತಿಳಿದುದೇನಿರಲಂತೆ ಅಲ್ಲೆ ವಿಹರಿಸು ಮತ್ತೆ
ತಿಳಿಯದಿಹುದಿಹುದಲ್ಲೆ ಸುಳಿದಾಡಲಲ್ಲೆ !
ಕಳೆದುದಳಿವುದೆ ? ಸುಳಿದೊಡಲ್ಲಿಹುದು ತಿಳಿವು ಕಾಣ್
ಅಳಿಮನಕೆ ಸರಿದಾರಿ ಜಾಣಮೂರ್ಖ//
ಓ, ಗೆಳೆಯಾ ನಾವೇನು ತಿಳಿದಿದ್ದೇವೋ ಅದೇ ಅಂತಿಮವಲ್ಲ ! ಅದೇ ಅಂತಿಮ ಅಂತ ನಾವು ಅಂದುಕೊಳ್ಳುತ್ತೇವೆ ಅಷ್ಟೆ. ಹಾಗಂದುಕೊಳ್ಳುವುದು ಮೂರ್ಖತನವಾಗುತ್ತದೆ ! ನಮ್ಮ ತಿಳುವಿನಲ್ಲೇ ಹಾಗೇ ವಿಹರಿಸುತ್ತಿದ್ದರೆ ಆ ತಿಳುವಿನಲ್ಲಿಯೇ ತಿಳಿಯದ ಎಷ್ಟೋ ಗೌಪ್ಯಗಳು ಅಡಗಿರುತ್ತವೆ ! ಶಾಂತವಾಗಿ, ಸೂಕ್ಷ್ಮವಾಗಿ ವಿಚಾರ ಮಾಡಿದರೆ ಸತ್ಯದ ಅರಿವಾಗುತ್ತದೆ. ಅದಕ್ಕೇನೆ ಕಳೆದ ಬದುಕಿನ ಹೆಜ್ಜೆ ಗುರುತುಗಳನ್ನು ಮರೆಯಬಾರದು! ಅವುಗಳ ಅನುಭವದ ಬುನಾದಿಯ ಮೇಲೆ ಮತ್ತೊಂದು ಸತ್ಯದ ಅನಾವರಣವಿರುತ್ತದೆ. ಕೆಲವರಿಗೆ ಕಾಣುತ್ತದೆ , ಮತ್ತೆ ಕೆಲವರಿಗೆ ಕಾಣುವುದಿಲ್ಲ. ಇನ್ನು ಕೆಲವರು ಕಂಡರೂ ಕಾಣದಂತಿದ್ದುಬಿಡುತ್ತಾರೆ ! ಏಕೆಂದರೆ ಸತ್ಯ ಕಹಿಯಲ್ಲವೇ !? ಅದಕ್ಕೆ ! ಆದರೆ ಆ ಸೂಕ್ಷ್ಮ ಅರಿವು ನಮ್ಮ ಚಂಚಲವಾದ ಮನಸ್ಸಿಗೆ ಸರಿದಾರಿಯೇ ಆಗಿರುತ್ತದೆ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021