ಕೆಸರ ಹಕ್ಕಿ
ಕೆಸರ ಹಕ್ಕಿಯು ಕೆಸರನಂಟದೆಯೆ ನಡೆವಂತೆ
ಹಸನಾಗಿ ಬದುಕೇಳು ಸಂಸಾರದೊಳಗೆ
ಮುಸುಕಲೇಂ ಮಾಯಾಂಧಕಾರ ಮಿಗೆ ಬದುಕಲ್ಲಿ
ಮಿಸುಕದಲೆ ಬದುಕೇಳೊ ಜಾಣಮೂರ್ಖ//
ಸ್ನೇಹಿತರೇ , ಕೆಸರಿನಲ್ಲಿರುವ ಹಕ್ಕಿ ತನಗೆ ಬೇಕಾದ ಆಹಾರವನ್ನು ಅಲ್ಲಿಯೇ ಪಡೆಯುತ್ತದೆ. ಆದರೆ ಕೆಸರನ್ನು ಮಾತ್ರ ಮೈಗೆ ಅಂಟಿಸಿಕೊಳ್ಳುವುದಿಲ್ಲ. ಹಾಗೆಯೇ ಸಂಸಾರದೊಳಗೇ ಇದ್ದರೂ , ಮಾಯಾಂಧಕಾರದ ಮಧ್ಯೆಯೇ ಇದ್ದರೂ ಸಹ ಅಂಟಿಯೂ ಅಂಟದಂತೆ ಇರಬೇಕು. ಮಹಾ ಪುರುಷರ ಬದುಕಿನ ನಡೆಯೆಲ್ಲವೂ ಹೀಗೆಯೇ ! ಸ್ವಲ್ಪವೂ ಮಿಸುಕಿ , ಕೊಸರಿದರೂ ಮಾಯೆಯ ಕೆಸರು ಅಂಟಿ ಕೊಳಕಾಗುವುದಂತೂ ನಿಶ್ಚಿತ ! ಸಂಸಾರ ವ್ಯಾಮೋಹದಿಂದ ಒಮ್ಮೆ ಬಿಡುಗಡೆಯಾದರೆ ಸಾಕು ಅಲ್ಲೇ ಇದ್ದರೂ ಅದು ಅಂಟುವುದಿಲ್ಲ ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021