ಇತ್ತುಬಿಡು ಹೃದಯವನು
ಇರುವುದೆಂಬಹಮಿನೊಳು ದೇವಗರ್ಪಿಸಲೇನು
ಗುರುವಿಗಿತ್ತರ್ಥಮೇನಾಸ್ತಿಯೇಂ ಚಿರವೆ ?
ಅರಿವಿನೊಳಗಿತ್ತು ಬಿಡು ಹೃದಯವನು ಗುರುವಿಂಗೆ
ಪರಮಪದ ನಿನಗಾಗ ಜಾಣಮೂರ್ಖ//
ನನ್ನ ಬಳಿ ದುಡ್ಡಿದೆ ! ಅದರಿಂದೆ ಇಷ್ಟು ಕೊಟ್ಟೆ ಎಂಬಹಂಕಾರ ಮನದೊಳಗೆ ಲೇಶಮಾತ್ರ ಸುಳಿದರೂ ಸಾಕು ! ಕೊಟ್ಟುದೇನೇ ಇರಲಿ ಕಸವಾಗಿಬಿಡುತ್ತದೆ. ನಾವು ಕೊಡುವ ಲೌಕಿಕಾಂಶಗಳಾವುವೂ ( ಹಣ ಆಸ್ತಿ, ಹಣ್ಣು , ಕಾಯಿ ಇತ್ಯಾದಿಗಳು) ಸ್ಥಿರವಲ್ಲ. ಸುಜ್ಞಾನದಿಂದ ಚಿಂತಿಸಯ್ಯಾ ಗೆಳೆಯಾ ! ಏನಾದರೂ ಕೊಡಬೇಕೆಂಬ ಮನಸ್ಸಿದ್ದರೆ ಅಹಂಕಾರ ಮಮಕಾರಗಳಿಂದ ಮುಕ್ತವಾದ , ಅತೀತವಾದ ಪರಿಶುದ್ಧವಾದ ಹೃದಯವನ್ನು ಅರ್ಪಿಸಿಬಿಡಯ್ಯಾ ಗೆಳೆಯಾ ! ಮನಸ್ಸು ಇಷ್ಟು ನಿರ್ಮಲವಾಗಿದ್ದರೆ ಪರಮಪದವೇ ಸಿಕ್ಕಿಬಿಡುತ್ತದೆ. ಗುರು ಕರುಣೆ ಅಂತಹುದು. ಇದರಲ್ಲಿ ಸಂದೇಹವೇ ಇಲ್ಲ ! ಕೊಟ್ಟ ಹಣ ಖರ್ಚಾಗುತ್ತದೆ ! ಕೊಟ್ಟ ಹಣ್ಣು ಕೆಟ್ಟುಹೋಗಬಹುದು ! ಆದರೆ ಕೊಟ್ಟ ನಿಷ್ಕಲ್ಮಶ ಪ್ರೀತಿ ಎಂದೆಂದಿಗೂ ಅಮರ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021