ಮನಸ್ಸು
ನಿನ್ನೊಡಲು ನಿನ್ನನ್ನ ನಿನ್ನುಸಿರು ನಿನ್ನಾಜ್ಞೆ
ನಿನ್ನಿಳೆಯು ನಿಂಬೆಳೆಯು ನಿನ್ನದೇ ಎಲ್ಲ !
ನಿನ್ನವನೆ ನಾನಾಗಿ ಅನ್ಯನನು ಓಲಯಿಪು
ದೆನ್ನ ಮನಮೆಂತದಿದೊ ಜಾಣಮೂರ್ಖ//
ಈ ಮುಕ್ತಕವನ್ನು ಓದಿದಾಗ ನೀನೆಂಬುದಾರೆಂಬ ಪ್ರಶ್ನೆಗೆ ಅನಂತ ಸೃಷ್ಟಿಯ ಕೈಹಿಡಿದು ಮುನ್ನಡೆಸುತ್ತಿರುವ ದೇವನೆಂಬುದೇ ಉತ್ತರವಾಗುತ್ತದೆ. ಹಾಗಿದ್ದರೆ ಎಲ್ಲಿದ್ದಾನೆ ಅವನು !? ಪುನಃಪ್ರಶ್ನೆ ! ನಮ್ಮೊಳಗೇ ಇದ್ದಾನೆ! ಅವನದೇ ಶರೀರ , ಅನ್ನ , ಆಜ್ಞೆ , ಉಸಿರು , ಇಳೆ , ಬೆಳೆ ಎಲ್ಲವೂ ! ಅಷ್ಟೇ ಏಕೆ ನನ್ನದೆಂಬುದು ಅಜ್ಞಾನದ ಪೊರೆಯಷ್ಟೆ ! ಆ ಪೊರೆ ಕಳಚಬೇಕಷ್ಟೆ. ಕಳಚಿದ ಮೇಲೆ ಸತ್ಯದರ್ಶನವಾಗುತ್ತೆ. ಅಲ್ಲಿ ವರೆಗೂ ನಾನತ್ತ್ವ ತುಂಬಿದ ಈ ಮನಸ್ಸು ! ಅದು ತಿಳಿದರೂ ಅದರೊಟ್ಟಿಗೇ ಹಾಗೆಯೇ ಅನ್ಯರನ್ನು ಓಲೈಸಿಕೊಂಡು , ನಂಬಿ ಬದುಕುತ್ತಿರುವ ಪರಿ ಒಂದು ಸೋಜಿಗವೇ ಸರಿ. ಅಲ್ಲವೇ ಗೆಳೆಯರೇ!?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021