ಮೌನ ! ಮೌನ ! ಮೌನ !
ಕೊಂಬೆಗಳ ಪಿಡಿದು ತಾ ಮರವನೇರಿದ ಮೇಲೆ
ಹಂಬಲಿಸಿ ತುಂಬಿರುವ ಹಣ್ಣ ಮಿಗೆ ತಿಂದು !
ಇಂಬೆಲ್ಲಿ ಮೇಲೆಲ್ಲ ಬರಿ ಬಯಲೆ ಕಾಂಬಂತೆ
ತುಂಬು ಬಾಳಿಗೆ ಮೌನ ಜಾಣಮೂರ್ಖ//
ಈಗ ನಾವು ಒಂದು ಮರವನ್ನು ಏರಿದ್ದೇವೆ ಎಂದಿಟ್ಟುಕೊಳ್ಳೋಣ. ಹಂಬಲಿಸಿ ,ಹಂಬಲಿಸಿ ಅದರಲ್ಲಿರುವ ರಸಭರಿತವಾದ ಹಣ್ಣುಗಳನ್ನು ತೃಪ್ತಿಯಾಗುವವರೆಗೂ ತಿಂದಿದ್ದೇವೆ. ಸವಿದು ಸಂತೋಷಿಸಿದ್ದೇವೆ. ಮತ್ತೂ ಕೊಂಬೆ ರೆಂಬೆಗಳನ್ನು ಹಿಡಿದು ಮರದ ತುದಿಯನ್ನು ತಲುಪಿದ್ದೇವೆ. ಮತ್ತೆ ಮೇಲೇರಲು ಏನೂ ಇಲ್ಲ ! ಏನಿದೆ ಅಲ್ಲಿ ! ಬರೀ ಬಯಲು ! ಬರೀ ಶೂನ್ಯ ! ಬರೀ ಮೌನ ! ಓ, ಗೆಳೆಯರೇ ತುಂಬು ಬಾಳಿನ ನಂತರವೂ ಅಷ್ಟೆ ! ಮುಗಿದ ಮೇಲೆ ಅದೇ ಮೌನ ! ಮೌನ ಮೌನ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021