ಬಲ್ಲೊಡೇಕಿಂತು ಪೇಳ್
ಎಲ್ಲದರೊಳಿರುವವಗೆ ಪಾಲ್ಮೊಸರ ನೈವೇದ್ಯ
ಬಲ್ಲೊಡೇನಾಸ್ತಿ ಹಣ ಭೌತಿಕದ ಕೇಳ್ಕೆ !
ಎಲ್ಲವರಿತರು ಏಕೊ ನಶ್ವರದ ಬೆಮೆ ಕಾಣೆ !
ಬಲ್ಲೊಡೇಕಿಂತು ಪೇಳ್ ಜಾಣಮೂರ್ಖ//
ಭಗವಂತನು ಸರ್ವವ್ಯಾಪಿ ! ಅಣುರೇಣು ತೃಣಕಾಷ್ಠಂಗಳಲ್ಲಿ ಪರಿಪೂರ್ಣ ! ವಿಶ್ವದ ಚರಾಚರ ವಸ್ತುಗಳೆಲ್ಲದರಲ್ಲಿಯೂ ದೇವತೇಜವೇ ತುಂಬಿರುವುದೆಂಬ ಸತ್ಯ ಗೊತ್ತಿದ್ದರೂ ಅವನಿಗೆ ಹಾಲು , ಮೊಸರು , ಹಣ್ಣು ಇತ್ಯಾದಿಗಳ ನೈವೇದ್ಯ ಮಾಡುತ್ತೇವೆ! ಹಣ, ಆಸ್ತಿ ಇವೆಲ್ಲಾ ಚಿರವಲ್ಲ ಎಂದು ಗೊತ್ತಿದ್ದರೂ ಸಹ ಇವನ್ನೇ ಬೇಡುತ್ತೇವೆ ! ಎಲ್ಲ ವೇದಾಂತ ವಿಚಾರಗಳನ್ನು ಮಾತನಾಡುತ್ತೇವಾದರೂ ಮತ್ತೆ ಮತ್ತೆ ನಶ್ವರವಾದುದರ ಭ್ರಮೆಯಲ್ಲಿ ಬಿದ್ದು ತೊಳಲಾಡುತ್ತೇವೆ ! ತಿಳಿದಿದ್ದರೂ ಸಹ ಇಂತಹಾ ಭ್ರಮೆಯಲ್ಲಿ ಬಿದ್ದು ಸತ್ಯದ ಮರೆವೇಕೆ !? ಈ ಮಟ್ಟದಲ್ಲಿ ಪ್ರಾಪಂಚಿಕಕೆಳೆಸಿ ಪಾರಮಾರ್ಥಿಕದ ಕನಿಷ್ಠ ಅರಿವೂ ಇಲ್ಲದವರಂತೆ ಬದುಕುತ್ತಿರುವುದಾದರೂ ಏಕೆ ? ಏನೆನ್ನಬೇಕು ನಮ್ಮ ಈ ಸ್ಥಿತಿಯನ್ನು ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021