ಕಳೆ
ಕಳೆಯ ಕೀಳದೆ ಇಳೆಯ ಫಸಲು ಫಲಿಸುವುದೆಂತು
ಬೆಳೆಯ ಕಾಣುವುದೆಂತು ಬಾಳ್ಗೆ ಕೂಳೆಂತು?
ತಿಳಿವೆಂಬ ಬೆಳೆಬೆಳೆಯಲಜ್ಞಾನ ಕಳೆಕೀಳು
ಬೆಳೆಯ ಕಳೆ ಕಾಣಾಗ ಜಾಣಮೂರ್ಖ//
ಜಮೀನಿಜಲ್ಲಿ ಕಳೆ ತೆಗೆಯದ ಹೊರತು ಬೆಳೆ ಹುಲುಸಾಗಿ ಬೆಳೆಯುವುದಿಲ್ಲ. ಮತ್ತೆ ಬೆಳೆಯನ್ನು ಕಾಣುವುದಾದರೂ ಎಂತು !? ನಮಗೆ ಆಹಾರ ಸಿಗುವುದಾದರೂ ಎಂತು? ಅಲ್ಲವೇ ? ಹಾಗೇನೇ ಹೃದಯವೆಂಬ ಭೂಮಿಯಲ್ಲಿ ತಿಳಿವೆಂಬ ಬೆಳೆಯ ಬೆಳೆಯ ಬೇಕಾದರೆ ಅಜ್ಞಾನವೆಂಬ ಕಳೆಯನ್ನು ಕಿತ್ತೊಗೆಯಲೇ ಬೇಕು. ಅದಕ್ಕೆ ಗುರುಕರುಣೆ ಅತ್ಯಗತ್ಯ. ಅಜ್ಞಾನದ ಕಳೆಯಳಿದಾಗ ನೋಡಯ್ಯಾ ಜ್ಞಾನದ ಬೆಳೆ ಕಳೆಯ ಪರಿಯನ್ನು!!
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021