ಇಂಧನ ಮತ್ತು ಬಂಡಿ
ಇಂಧನವು ಇರುವನಕ ಬಂಡಿಯೋಡುವುದಲ್ತೆ
ಬಂಧನವದೆಂತದೈ ದೂರ ಪಯಣದೊಳು!
ಇಂಧನವು ಮುಗಿಯಲ್ಕೆ ಪಯಣವೂ ಮುಗಿವುದೈ
ಬಂಧನವ ಕಳೆದು ಬಾಳ್ ಜಾಣಮೂರ್ಖ//
ಇಂಧನವಿರುವ ವರೆಗೆ ಬಂಡಿಯೋಡುತ್ತದೆ. ಅದು ಮುಗಿದೊಡನೆ ಎಲ್ಲಿದೆಯೋ , ಹೇಗಿದೆಯೋ ಹಾಗೆಯೇ ನಿಂತು ಬಿಡುತ್ತದೆ. ಎಂತಹಾ ಬಾಂಧವ್ಯ ಇವೆರಡಕ್ಕೂ ! ಬಂಡಿಯೇನೋ ನಿಂತು ಬಿಡುತ್ತೆ. ಆದರೆ ಪಯಣ ! ಅದು ಮುಗಿದಿರೋದಿಲ್ಲ ! ಸೇರಬೇಕಾದ ಗುರಿ ಮುಟ್ಟಿರೋದಿಲ್ಲ. ಏನು ಮಾಡುವುದು ! ನಡೆದಾದರೂ ಗುರಿ ಮುಟ್ಟಲೇಬೇಕು ತಾನೆ!? ಚಿಂತಿಸುತ್ತಾ ಕುಳಿತುಕೊಳ್ಳಲಾದೀತೆ ? ಹಾಗೆಯೇ ಈ ದೇಹವೆಂಬ ಬಂಡಿಗೆ ಇಂಧನವಾವುದಿರಬಹುದು ಊಹಿಸಿ ಗೆಳೆಯರೇ ! ಆ ಇಂಧನವು ಮುಗಿದೊಡನೆ ಬದುಕಿನ ಪಯಣ ಅಲ್ಲಿಯೇ ನಿಲ್ಲುತ್ತದೆ. ಆದರೆ ಗುರಿ ಮುಟ್ಟಬೇಕಲ್ಲ ! ನಾವು ನಿಲ್ಲಬಾರದು.ಆತ್ಮಶಕ್ತಿಯನ್ನೇ ಇಂಧನವಾಗಿಸಿ ಮುಂದೆ ಸಾಗಿ ಗುರಿ ಮುಟ್ಟಬೇಕು. ಇಂದಲ್ಲ ನಾಳೆ ಇಂಧನ ಮುಗಿದೇ ಮುಗಿಯುವುದೆಂಬ ಖಾತ್ರಿಯಂತೂ ಇದೆ. ಆತ್ಮಶಕ್ತಿಯನ್ನು ಜಾಗೃತಗೊಳಿಸಿಕೊಂಡು ಮುನ್ನಡೆವತ್ತ ಚಿಂತಿಸಬೇಕಿದೆ. ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021