ನನ್ನೊಳಗಿನ ನಾನು
ನನ್ನೊಳಗಿನಾ ನನ್ನ ನನ್ನಿಯರಿಯಲೆ ಇಲ್ಲ
ಮುನ್ನ ಜಗವಾಳುವಾ ಹುನ್ನಾರವೇಕೆ?
ಘನ್ನ ಮಹಿಮನು ನಗುವ ಸುಮ್ಮನಿರು ಛೀ ಮನವೆ
ಮುನ್ನ ನೀನರಿ ನಿನ್ನ ಜಾಣಮೂರ್ಖ//
ಇದೆಂತಹಾ ವಿಚಿತ್ರವೆಂದರೆ ನಾವು ಯಾರು ? ಎಲ್ಲಿಂದ ಬಂದೆವು ? ಎಲ್ಲಿಗೆ ಹೊರಟಿದ್ದೇವೆ ? ನಮ್ಮ ಮುಂದಿನ ನಡೆ ಏನು? ಇತ್ಯಾದಿ ಸತ್ಯಗಳೇ ನಮಗೇ ಗೊತ್ತಿರುವುದಿಲ್ಲ . ಆದರೂ ಬಾಹ್ಯ ಜಗತ್ತಿನ ಅಧಿಪತ್ಯಕ್ಕೆ ಹೋರಾಡುತ್ತೇವೆ. ಏನೇನೋ ಹುನ್ನಾರ ಮಾಡುತ್ತೇವೆ. ಸಂಚು ಮಾಡುತ್ತೇವೆ. ತಾನಿಲ್ಲಿ ಚಿರವೆಂದು ಭಾವಿಸಿ , ತವಕಿಸಿ, ಭ್ರಾಂತಿ ಪಡುತ್ತೇವೆ. ಭಗವಂತನು ಈ ಬಾಲಿಶವನ್ನು ಕಂಡು ನಗದೆ ಇರುತ್ತಾನೆಯೇ ? ಓ ಮನಸ್ಸೇ ಜಗತ್ತನ್ನು ಆಳುವ ಮೊದಲು ನಿನ್ನನ್ನು ನೀನು ಸಂಬಾಳಿಸು. ಮೊದಲು ನಿನ್ನನ್ನು ನೀನರಿ. ಇದೊಂದು ದೊಡ್ಡ ಸವಾಲೂ ಹೌದು ಅಂತೆಯೇ ಸಾಧನೆಯೂ ಹೌದು. ಆಮೇಲೆ ನಮಗೇನು ಬೇಕೋ ಅದು ಸಿಕ್ಕೇ ಸಿಗುತ್ತದೆ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021