ಹುಡುಕಾಟ
ಕಳೆದು ಕೊಂಡಿಹೆನೆಂದು ಹುಡುಕುವೇನನು ಕೆಳೆಯ
ತಿಳಿದಿಹೆಯ ಕಳೆದುದೇನೆಂಬುದನು ಜಾಣ!
ಕಳೆದು ಕತ್ತಲೆಯೊಳಗೆ ಬೆಳಕಲರಸಲುಮೆಂತು?
ಮಳಲಿಳೆಯ ಮಳೆಯಂತೆ ಜಾಣಮೂರ್ಖ//
ಒಂದು ಸಾರಿ ನಮ್ಮ ಸುತ್ತಣ ಜಗತ್ತನ್ನು ಗಮನಿಸಿ ನಮ್ಮನ್ನೂ ಒಳಗೊಂಡಂತೆ ಏನನ್ನೋ ಕಳೆದುಕೊಂಡಂತೆ ಇರುತ್ತೇವೆ. ಆದರೆ ನಿಜವಾಗಿ ಕಳೆದುಕೊಂಡಿರೋದೇನು ಅಂತ ಯಾರಿಗೂ ಗೊತ್ತಿಲ್ಲ. ಕತ್ತಲೆಯಲ್ಲಿ ಕಳೆದುಕೊಂಡು ಬೆಳಕಿನ ಅಂಗಳದಲ್ಲಿ ಬಂದು ಹುಡುಕಿದರೆ ಸಿಗುವುದೇನಯ್ಯ ಗೆಳೆಯ ! ಈ ಹುಡುಕಾಟ ಹೇಗಿದೆ ಎಂದರೆ ಮರಳುಗಾಡಿನ ಮಳೆಯಂತೆ ! ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಓ ಗೆಳೆಯಾ, ಕಳೆದುಕೊಂಡಿರೋದೇನು? ಹುಡುಕುತ್ತಿರೋದೇನು ? ಎಲ್ಲಿ ಹುಡುಕಬೇಕು ? ಹೇಗೆ ಹುಡುಕಬೇಕು ? ಇವೆಲ್ಲಾ ಪ್ರಶ್ನೆಗಳಿಗೆ ಮೊದಲು ಉತ್ತರ ಕಂಡುಕೊಳ್ಳಬೇಕು ! ಆಮೇಲೆ ಗುರಿಯರಸಿ ನಿರ್ದಿಷ್ಟವಾಗಿ ಸಾಗಬೇಕು. ಆತ್ಮಜ್ಞಾನವೆಂಬ ಸುಂದರ ಪ್ರಶಾಂತ ಸರೋವರದಲ್ಲಿ ಮಿಂದು ‘ ಪ್ರಬುದ್ಧೋಸ್ಮಿ’ ಎಂದು ಸಾಗಬೇಕೇ ಹೊರತು ಲೌಕಿಕ ಬದುಕಿನ ಈ ಹುಡುಕಾಟಕ್ಕೇ ‘ ಬದ್ಧೋಸ್ಮಿ’ ಎಂಬಂತೆ ಸಾಗಬಾರದು. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021