ಗುರು – ಗುರಿ
ಗುರುಪಾದವಿಡಿದು ತಾನರಿವಿನೊಡನೊಂದಾಗಿ
ಗುರಿಯನರಿತಡಿಗಡಿಗೆ ನಡೆವುದತಿಶಯವು
ಗುರುತತ್ತ್ವವರಿತು ತಾ ಗುರಿಯತ್ತ ಸಾರ್ದಪುದು
ಹರತತ್ತ್ವವದೆ ನಿಜದಿ ಜಾಣಮೂರ್ಖ//
ಗುರುವನ್ನು ನಂಬಿ , ಅವರಿತ್ತ ಅರಿವಿನಿಂದ ನಿಸ್ಪೃಹವಾಗಿ , ಸರಳವಾಗಿ ಬದುಕು ಸಾಗಿಸುವವರಿಗೆ ಯಾವ ತೊಂದರೆಗಳೂ ಬಾರವು. ಗುರುವಿನ ಜೀವನವೇ ಒಂದು ಪಾಠವಿದ್ದಂತೆ. ಕೆಲವಂ ಬಲ್ಲವರಿಂದ ಕಲ್ತು….. ಎಂಬಂತೆ ಅವರ ಜೀವನ ದರ್ಶನವೇ ಒಂದು ಸುಂದರ ಹಾಗೂ ಅರ್ಥಪೂರ್ಣ ಅಧ್ಯಾಯ ! ಅದೇ ಮುಕ್ತಿ ಮಾರ್ಗದ ಮೆಟ್ಟಿಲು ! ಅಂತಹಾ ಗುರುತತ್ತ್ವವನ್ನು ಅರಿತು ಬದುಕಿನ ಗುರಿಯ ಕಡೆಗೆ ಸಾಗಬೇಕು. ಗುರುತತ್ತ್ವವೇ ಹರತತ್ತ್ವ ! ಇದಕ್ಕಿಂತ ಇನ್ನೇನು ಬೇಕು ? ಅದಕ್ಕೇ ದಾಸವರೇಣ್ಯ ಪುರಂದರ ದಾಸರು ” ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದಿದ್ದಾರೆ. ಹೃದಯದ ಕಣ್ತೆರೆದು ನೋಡುವವನಿಗೆ ಇಡೀ ವಿಶ್ವವೇ , ಗುರುತತ್ತ್ವಕ್ಕೆ ಪೂರಕವಾಗಿ ಪಂಚಭೂತಗಳೇ ಗುರುವಾಗಿ ದಾರಿತೋರುತ್ತಿವೆ. ಕಾಣುವ ಕಣ್ಣು , ನೋಡುವ ಸುಂದರ ದೃಷ್ಟಿಕೋನ ಬೇಕಿದೆ ಅಷ್ಟೆ ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021