ಮತ್ತೆ ಕತ್ತಲದೇಕೊ
ಸುತ್ತಮುತ್ತಲು ಬಯಲು ನಿತ್ಯವೂ ಬಯಲಾಟ ಹೊತ್ತೇರಿ ಕತ್ತಲಡರೆಲ್ಲ ಹೊರಡುವರು ಕತ್ತಲಿಗೆ ಬೆಳಕಿತ್ತು ಕಾವನೈ ಗುರುರಾಯ ಮತ್ತೆ ಕತ್ತಲದೇಕೊ ಜಾಣಮೂರ್ಖ //
ಈ ಜಗತ್ತು ಒಂದು ದೊಡ್ಡ ಬಯಲು. ಈ ಬಯಲಿನಲ್ಲಿ ನಿತ್ಯವೂ ಬಯಲಾಟ ! ನೂರಾರು ಸಾವಿರಾರು ತರಹೆಯ ಆಟಗಳು ! ಹೊತ್ತೇರಿ ಕತ್ತಲಾದೊಡನೆ ಎಲ್ಲರೂ ಹೊರಡುವರು. ಹೊರಡಲೇಬೇಕು ! ಆದರೆ ಕತ್ತಲಿಗೆ ಬೆಳಕಿತ್ತು ಕಾಯಲು ಗುರುರಾಯನಿದ್ದಾನೆ. ತನ್ನನ್ನು ನಂಬಿದವರನ್ನು ಅವನೆಂದಿಗೂ ಕೈ ಬಿಡನು. ಆದರೇಕೋ ಸ್ವಲ್ಪ ಈ ಲೌಕಿಕದೆಡೆಗೆ ಜಾರಿದೊಡೆ ಮುಗಿಯಿತು ಮತ್ತದೇ ಕತ್ತಲು. ಗಾಢವಾದ ಅಂಧಕಾರ. ಆದರೆ ಆ ಗುರುವಿತ್ತ ಅರಿವಿನ ಬೆಳಕಿನ ಗುಂಗಿನಲ್ಲೇ ಇರುವವರಿಗೆ ಎಲ್ಲಿಯ ಕತ್ತಲು ? ಅವರು ನಿತ್ಯ ತೃಪ್ತರು. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021