ಬೇಹುಗಾರಿಕೆಯೇಕೊ ?
ದೇಹಭಾವವ ತೊರೆದು ಆತ್ಮಭಾವದಿ ನೋಡು ಮೋಹಾದಿ ಭಾವದೊಳಗೇರಿಳಿತವಿರದು ! ದೇಹ ಮೋಹಗಳೆಲ್ಲ ದೇವನದೆ ಆಗಿರಲು ಬೇಹುಗಾರಿಕೆಯೇಕೊ ಜಾಣಮೂರ್ಖ//
ಪ್ರತಿದಿನವೂ , ಪ್ರತಿಕ್ಷಣವೂ ಮನಸ್ಸು ಏನಾದರೊಂದು ಸಂತೋಷವನ್ನೋ , ದುಃಖವನ್ನೋ ಅನುಭವಿಸುತ್ತಲೇ ಇರುತ್ತದೆ. ಅದೇನೇ ಆಗಿರಲಿ ದೇಹಭಾವದಿಂದ ನೋಡಬೇಡಯ್ಯಾ ಗೆಳೆಯ ! ಆತ್ಮಭಾವದಿಂದ ನೋಡು. ಆಗ ನಮ್ಮ ಅಂತರಂಗದಲ್ಲಿ ಯಾವ ಏರಿಳಿತಗಳೂ ಉಂಟಾಗುವುದಿಲ್ಲ. ಭಾವೋದ್ವೇಗಕ್ಕೆ ಒಳಗಾಗುವುದಿಲ್ಲ. ಬದುಕಿನಲ್ಲಿ ಸ್ವಲ್ಪ ಅನುಭವಿಸಿ ನೋಡಿದರೆ ಇದು ತಿಳಿಯುತ್ತದೆ. ಸ್ಥಿತಪ್ರಜ್ಞರಾಗಿಬಿಡುತ್ತೇವೆ ನಾವು. ಈ ಶರೀರವಾಗಲಿ, ಕಾಣದೆ ಅವಿತು ಕೆಲಸ ಮಾಡುತ್ತಿರೋ ಮೋಹಾದಿ ಭಾವಗಳಾಗಲಿ , ಏನೂ ಮಾಡವು ! ಇವೆಲ್ಲವೂ ಭಗವಂತನ ಲೀಲೆ ಎಂಬುದನ್ನು ಅರಿ. ಶಾಂತಿ ನೆಮ್ಮದಿಯನ್ನು ಅರಸಿ ಎಲ್ಲೆಲ್ಲೋ ಅಲೆಯುವುದಕ್ಕಿಂದ ನಿನ್ನಲ್ಲಿಯೇ ಇವುಗಳ ನೆಲೆಯನ್ನು ಕಾಣು. ಈ ನಿಟ್ಟಿನಲ್ಲಿ ಎಲ್ಲಿಯ ವರೆಗೆ ನಾವು ನಮ್ಮನ್ನು ಸರಿಪಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಈ ಬಂಧನಗಳ ತೊಳಲಾಟ ಇದ್ದದ್ದೇ ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021