ಸುಳಿವುದೆಂತೈ ತಿಳಿವು
ಮೊಳೆವುದೇಂ ಹಸನಿರದ ಮೊಳೆವಿತ್ತ ಬಿತ್ತಲದು
ಇಳೆಯಮ್ಮಳೇಂಗೈವಳಿಂತ ವಿತ್ತಿರಲು !
ಅಳಿಮನದಿ ವಿಷಯ ಮೊಳೆವಿತ್ತ ಬಿತ್ತಿರುವಾಗ
ಸುಳಿವುದೆಂತೈ ತಿಳಿವು ಜಾಣಮೂರ್ಖ //
ಹಸನಿಲ್ಲದ ಮೊಳೆವಿತ್ತನ್ನು ಬಿತ್ತಿದರೆ ಅದು ಫಲ ಕೊಡುವುದೇನು ? ಮೊಳಕೆಯೊಡೆಯುವುದೇನು ? ಅದಕ್ಕೆ ಇಳೆಯಮ್ಮಳನ್ನು ದೂರುವುದು ತರವೇನು ? ಹಾಗೆಯೇ ನಮ್ಮ ಮನಸ್ಸು ಕೂಡ. ಅರಿಷಡ್ವರ್ಗಾದಿ ವಿಷಯದ ಮೊಳೆವಿತ್ತನ್ನು ( ಬಿತ್ತನ್ನು) ಬಿತ್ತಿದರೆ ಸುಜ್ಞಾನ ಪ್ರಾಪ್ತಿಯಾಗುವುದಾದರೂ ಹೇಗೆ ? ಮನಸ್ಸಿನಲ್ಲಿ ಸದ್ವಿಚಾರ , ಸದ್ವಿಷಯ , ಸನ್ನಡತೆ , ನಿಸ್ವಾರ್ಥಾದಿ ಫಲದಾಯಕವಾದ ಮೊಳೆವಿತ್ತನ್ನು ಬಿತ್ತಿದರೆ ಅಂತಹಾ ಬೆಳೆಯೇ ಪ್ರಾಪ್ತವಾಗುತ್ತದೆ. ಅದುಬಿಟ್ಟು ಸ್ವಾರ್ಥ , ಮೋಹಾದಿ ವಿಷಯದ ಗಾಟು ತುಂಬಿದ್ದರೆ ತಿಳಿವಿನ ತಳವನ್ನು ಕಾಣುವುದಾದರೂ ಎಂತು ? ಜ್ಞಾನದ ಆನಂದವನ್ನು ಪಡೆಯುವುದಾದರೂ ಎಂತು ? ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021