ಒಳ್ನುಡಿಯ ಪೇಳ್ವೊಡೆ
ಒಳ್ನುಡಿಯ ಪೇಳ್ವೊಡವ ಪಿರಿಯನೇಂ ಕಿರಿಯನೇಂ
ಪೇಳ್ವವನದಾರಿರಲಿ ಕೇಳ್ವಮನವಿರಲಿ
ಬೆಳಕೀವ ಪಣತಿ ತಾಂ ಪಿರಿದೇನು ಕಿರಿದೇನು ಬೆಳಕು ಮುಖ್ಯಮದಲ್ತೆ ಜಾಣಮೂರ್ಖ//
ಒಳ್ಳೆಯ ಮಾತುಗಳನ್ನು ಹೇಳುವವರು ಯಾರಾದರೇನು ? ಅವರು ಹಿರಿಯರಾದರೇನು , ಕಿರಿಯರಾದರೇನು !? ಬಿತ್ತರಗೊಳ್ಳುವ ಅರಿವಿನ ಬೆಳಕು ಮುಖ್ಯ ತಾನೆ ? ಹಣತೆ ಯಾವುದಾದರೇನಂತೆ ? ಅದು ನೀಡೋ ಬೆಳಕು ಮುಖ್ಯ ! ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021