ಭಯ
ಗುರುಚರಣ ನಂಬಿದರು ಬಿಡವು ಬಾಳ್ಕಷ್ಟಗಳು
ಕರುಣೆಯಿಲ್ಲದೆ ಬಾಳ ಭಯದೊಳದ್ದಿಹವೊ !
ಧರೆಯ ನಾಟಕದೊಳಗೆ ಇದುವೊಂದು ದೃಶ್ಯಕಾಣ್
ಕರಗದಿದು ಸುಲಭದೊಳು ಜಾಣಮೂರ್ಖ//
ಸದ್ಗುರುವಿನ ಚರಣಕಮಲಗಳನ್ನು ನಂಬಿದರೂ ಬಾಳ ಕಷ್ಟಗಳು ಮಾತ್ರ ದೂರವಾಗವು. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಅವು ಕಷ್ಟಗಳಾಗಿರದೆ ಕಷ್ಟದ ಭಯಗಳಾಗಿವೆ ಅಷ್ಟೆ ! ಅಲ್ಲವೇ ? ಯೋಚಿಸಿ ನೋಡಿ ! ಈ ಲೌಕಿಕ ಭಯಗಳೇ ನಮ್ಮನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ಜೊತೆಗೊಂದಿಷ್ಟು ನಮ್ಮ ಅಹಂಕಾರ , ಸ್ವಾಭಿಮಾನ ,ಆಸೆ ಇತ್ಯಾದಿಗಳ ಕಾಟ. ಇವುಗಳಿಗೆ ಈ ಮನಸ್ಸು ಬಹುಬೇಗ ಬಲಿಯಾಗಿ ಬಿಡುತ್ತದೆ. ನೊಂದು ನೊಂದು ಶರೀರ, ಮನಸ್ಸುಗಳು ಕೃಷವಾಗಿ ಹೋಗುತ್ತವೆ. ನಾಲ್ಕು ಕಾಸು ಕೂಡಿಟ್ಟುಬಿಟ್ಟರೆ ಸಾಧಿಸಿಬಿಟ್ಟೆ ಎನ್ನುವುದು ಮೂರ್ಖತನ ! ಸಾಧನೆ ಎಂದರೆ ಹಣಸಂಪಾದನೆಯಷ್ಟೇ ಅಲ್ಲ ! ವಾಮ ಮಾರ್ಗಿಗಳೂ ಲಕ್ಷ ಲಕ್ಷ ಹಣಗಳಿಸುತ್ತಾರೆ ! ಆದರೆ ಮೌಲ್ಯಗಳ ಕತೆ ಹೇಗೆ ? ಬದುಕಿನ ಗುರಿ ಬೇರೆಯೇ ಇದೆ. ಬದುಕಿನಲ್ಲಿ ಈ ಎಲ್ಲಾ ಭಯಗಳಲ್ಲಿ ಬೀಳದೆ ಮುಂದೆ ಸಾಗಬೇಕಿದೆ. ಬಾಳ ನಾಟಕದಲ್ಲಿ ಇದೊಂದು ದೃಶ್ಯ ಎಂದು ಸಾಗಬೇಕಷ್ಟೆ. ಇದೇನೂ ಸುಲಭವಾಗಿ ಕರಗದು. ಆದರೆ ಗುರುಕಾರುಣ್ಯ ಲಭಿಸಿದರೆ ಇವೆಲ್ಲ ಏನೂ ಅಲ್ಲ ! ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021