ರಸಗವಳವಿರಲೇನು
ರಸಗವಳವಿರಲೇನು ಹಸಿವಿಗೊದಗದ ಮೇಲೆ
ಹಸನಿದ್ದರೇನು ಬಾಳ್ ಸಮಯಕಾಗದಿರೆ
ಬಿಸಜಾಕ್ಷನಾ ನಾಮ ಭಕ್ತಿಯಿಲ್ಲದೊಡೆಂತು?
ವಸುಧೆಯೊಳ್ ವ್ಯರ್ಥವೈ ಜಾಣಮೂರ್ಖ //
ಸ್ನೇಹಿತರೇ, ಸ್ವಲ್ಪ ಯೋಚಿಸಿ. ನಮ್ಮ ಬಳಿ ರಸಗವಳವೇ ಇದೆ. ಆದರೆ ತುಂಬಾ ಹಸಿದಾಗ ಸಿಗಲ್ಲ ! ಆಮೇಲೆ ಅಂದರೆ ಹಸಿವಿಗೆ ಏನು ಸಿಗುತ್ತೋ ಅದನ್ನು ತಿಂದು ಹಸಿವಿಂಗಿದ ಮೇಲೆ ಸಿಗುತ್ತೆ ! ಏನು ಪ್ರಯೋಜನ ? ನಾವು ಬದುಕಿನಲ್ಲಿ ಹಸನಾಗಿದ್ದಾಗ ಅಂದರೆ ನೆಮ್ಮದಿಯಿಂದಿದ್ದಾಗ ಲೋಗರ ಕಷ್ಟಕ್ಕೆ ಆಗದೆ ಸ್ವಾರ್ಥದಿಂದ ಬದುಕಿದರೆ ಏನು ಪ್ರಯೋಜನ ? ಹಾಗೆಯೇ ನಿಶ್ಚಲ ಭಕ್ತಿಯಿಲ್ಲದೇ ಶ್ರೀಹರಿಯ ನಾಮ ಜಪವನ್ನು ಅನವರತ ಮಾಡಿದರೇನು ಪ್ರಯೋಜನ ! ಅಲ್ಲವೇ ಗೆಳೆಯರೇ ?! ಬದುಕಿನಲ್ಲಿ ಎಲ್ಲವೂ ತೋರಿಕೆಯಾಗಬಾರದು. ಆತ್ಮಪೂರ್ವಕವಾಗಿರಬೇಕು. ಆದರೇನು ! ಹಳದಿ ಕಣ್ಣಿಗೆ ತಾನು ಮಾಡುತ್ತಿರುವುದೇ ಸರಿ ಎನ್ನುವ ಪೊರೆ ಕವಿದಿರುವಾಗ ಸತ್ಯವು ಗೋಚರವಾಗುವುದಾದರೂ ಎಂತು ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021