ಸಲಿಸೇಳು ನಿನ್ನ ನೀ
ಫಲಪುಷ್ಪ ಗಂಧಾದಿ ದೀಪಧೂಪಾದಿಗಳು
ನಲವಿನಿಂದೊಂದಾಗಿ ದೇವನೊಳು ಮುದದಿ
ಒಲವಿನಿಂದಿತ್ತು ಭಕ್ತಿಯ ಸೆಲೆಯ ಸಿಂಚಿಸಲು
ಸಲಿಸೇಳು ನಿನ್ನ ನೀ ಜಾಣಮೂರ್ಖ//
ದೇವನಿಗೆ ಅರ್ಪಿತವಾಗುವ ಫಲಪುಷ್ಪ , ಗಂಧ , ದೀಪ ಧೂಪಾದಿಗಳು ಒಲವಿನಿಂದ ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡುಬಿಡುತ್ತವೆ. ಮತ್ತೆ ಒಲವಿನಿಂದ ನಮಗೆ ಭಕ್ತಿಯ ಸೆಲೆಯ ಸಿಂಚನವನ್ನು ಪರಿಮಳದ ರೂಪದಲ್ಲಿ ನೀಡಿ ಧನ್ಯತೆಯನ್ನು ಪಡೆಯುತ್ತವೆ. ನಾವು ಆ ಪರಿಮಳವನ್ನು ಆಸ್ವಾದಿಸುತ್ತೇವೆ. ಅವುಗಳಂತೆ ನಮ್ಮ ಬದುಕೂ ಧನ್ಯವಾಗಬೇಕಲ್ಲವೇ ? ಕೃತಾರ್ಥವಾಗಬೇಕಲ್ಲವೇ ? ಅವು ಪರಿಮಳವನ್ನು ಹಂಚಿದಂತೆ ನಾವೂ ಸಹ ನಮ್ಮನ್ನು ಭಗವಂತನಿಗೆ ಅರ್ಪಿಸಿಕೊಂಡು ಏನಾದರೂ ಹಂಚಬೇಕಲ್ಲವೇ !? ಏನ ಹಂಚಬಲ್ಲೆವು ನಾವು !? ಏನಾದರೂ ಸಾರ್ಥಕವಾಗುವಂತಹುದನ್ನೇ ಹಂಚಬೇಕು. ಅಲ್ಲವೇ ಗೆಳೆಯರೇ ?!
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021