ವಿಧಿಗೆ ಎದಿರಾರು ?
ಅಂತಕನೆ ಬಂದು ತಾ ಪಾಶವನು ಬೀಸಲೇ
ನಂತ್ಯಕಾಣದು ಜೀವ ಕರ್ಮ ಕಳೆವನಕ !
ಸಂತರೋ ಮಹಾಂತರೊ ಪಿಂತೆ ನಿಂತವರುಂಟೆ?
ಇಂತು ಭಯವೇಕಿದಕೆ ಜಾಣಮೂರ್ಖ //
ಅಂತ್ಯಕಾಲ ಸಮೀಪಿಸುವ ವರೆಗೂ ಅಂದರೆ ಕರ್ಮ ಸವೆಯುವ ವರೆಗೂ ಸಾಕ್ಷಾತ್ ಯಮಧರ್ಮನೇ ಬಂದು ಪಾಶ ಬೀಸಿದರೂ ಏನೂ ಮಾಡಲಾಗುವುದಿಲ್ಲ. ಭವದ ಬಂದ ತೀರಿದ ಮೇಲೆ ಕ್ಷಣ ಮಾತ್ರವೂ ಇಲ್ಲಿರಲಾಗುವುದಿಲ್ಲ. ಸಂತರೂ ಮಹಾಂತರುಗಳೂ ಚಿರವಾಗಿ ನಿಂತಿರುವರೇನಿಲ್ಲಿ !? ಇಲ್ಲ ತಾನೆ? ಮತ್ತೆ ಈ ಸಾವಿಗೆ ಭಯವಾದರೂ ಏಕೆ !? ಅಷ್ಟಕ್ಕೂ ಯಾವುದೂ ನಮ್ಮ ಕೈಲಿಲ್ಲ ! ವಿಧಿಗೆ ಎದಿರಾರು ? ಅಲ್ಲವೇ ಗೆಳೆಯರೇ ?!
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021