ಮೃಡತತ್ತ್ವವರಿತಿರಲು !
ಕೊಡದ ಕಡವರ ಬಿಟ್ಟು ಒಡೆವ ಕುಳವರಸುವರೆ?
ಒಡನಿರುವ ಮದ್ದ ಬಿಟ್ಟಡವಿಯಲಯುವರೆ?
ಮೃಡತತ್ತ್ವವರಿತಿರಲು ಮಡಿಮಂತ್ರ ಗೊಡವೆಯೇ
ಕೊಡಲ ಶಿವನರಿಯೇಳೊ ಜಾಣಮೂರ್ಖ //
ಈಗ ನಮಗೊಂದು ಕೊಡದಷ್ಟು ನಿಧಿ ಸಿಕ್ಕಿದೆ ಎಂದಿಟ್ಟುಕೊಳ್ಳೋಣ. ಕೊಡವನ್ನು ಭದ್ರ ಮಾಡುತ್ತೇವೋ ಅಥವಾ ಕೊಡವನ್ನು ಅಲ್ಲೇ ಬಿಟ್ಟು ಅದನ್ನು ಒಡೆವ ಕುಳವನ್ನು ಹುಡುಕುತ್ತಾ ಸಾಗುತ್ತೇವೋ !?
ಹಾಗೆಯೇ ನಮ್ಮ ಕಾಯಿಲೆಗೆ ಮದ್ದು ಅಂಗೈಲೇ ಇರುವಾಗ ಯಾರಾದರೂ ಗಿಡಮೂಲಿಕೆ ಅರಸಿ ಕಾಡಿಗೆ ಹೋಗುತ್ತಾರೆಯೇ ?
ಮಡಿ , ಮಂತ್ರಗಳಿಗೆ ಅತೀತನಾದವನು ಆ ಭಗವಂತ ಎಂಬ ಮೃಡತತ್ತ್ವವು ತಿಳಿದ ಮೇಲೂ ಮಡಿ ಮಂತ್ರದ ಗೊಡವೆಯೇ ! ಓ ಗೆಳೆಯಾ, ನಮ್ಮಲ್ಲೇ ಒಂದಾಗಿದ್ದು , ಚೈತನ್ಯಸ್ವರೂಪಿಯಾದ ಆ ಭಗವಂತನನ್ನು ಎಲ್ಲೆಲ್ಲೋ ಹುಡುಕುವುದಾದರೂ ಏಕೆ ? ಸ್ವಲ್ಪ ಶಾಂತವಾಗಿ ಹುಡುಕಿದರೆ ನಿನ್ನಲ್ಲಿಯೇ ಸಿಕ್ಕಿಬಿಡುತ್ತಾನವನು. The kingdom of god within you ! ದೇವರ ಸಾಮ್ರಾಜ್ಯ ನಿನ್ನೊಳಗೇ ಇದೆ ! ಇನ್ನಾದರೂ ಅದನ್ನು ಕಾಣೇಳಯ್ಯಾ ಗೆಳೆಯ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021