ಏನ ಮಾಳ್ಪುದು ವಿಧಿಯು
ಧ್ಯಾನದೊಳ್ಕಲೆತವನ ಮೌನದೊಳ್ಮರೆತವನ
ನೀನೆನ್ನುತನವರತ ಸೇವೆಗೈದವನ
ನಾನತ್ವ ಮೆಟ್ಟಿದನ ವಿನಯನಂ ವಿಧಿಯು ತಾ
ನೇನ ಮಾಳ್ಪುದು ಪೇಳು ಜಾಣಮೂರ್ಖ//
ಸದಾ ಧ್ಯಾನದಲ್ಲಿ ಅಂತರ್ಮುಖಿಯಾದವನನ್ನು , ಕಷ್ಟ ಸುಖಗಳೆಲ್ಲದರಲ್ಲೂ ಮೌನವಾಗಿ ಇರು ವನನ್ನು , ಮಾಡುವ ಪ್ರತಿಯೊಂದು ಕಾರ್ಯವೂ ಭಗವಂತನ ಸೇವೆಯೆಂಬ ಭಾವದಲ್ಲಿ ಕಾರ್ಯವೆಸಗುವವನನ್ನು , ನಾನೆಂಬ ಅಹಂಕಾರವನ್ನು ಮೆಟ್ಟಿ ನಿಂತವನನ್ನು , ವಿನಯಗುಣ ಸಂಪನ್ನನನ್ನು ವಿಧಿಯೂ ಸಹ ಏನೂ ಮಾಡಲಾರದು ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021