ಹೊರತಾರು ವಿಧಿಗೆ ಪೇಳ್
ಮರಣವನು ಗೆದ್ದೊಡೇನಮೃತ ಪಾನವಮಾಡಿ ಸುರರರಸುವಾದೊಡೇನಾಳದಿರೆ ಮನವ
ನರಳಲಿಲ್ಲವೆ ಎಲ್ಲ ಭವದಬಂಧನದೊಳಗೆ ಹೊರತಾರು ವಿಧಿಗೆ ಪೇಳ್ ಜಾಣಮೂರ್ಖ //
ಸಮುದ್ರ ಮಂಥನದ ಕಾಲದಲ್ಲಿ ಉದಯಿಸಿದ ಅಮೃತವನ್ನು ಕುಡಿದವರೆಲ್ಲರೂ ಅಮರರಾದರಷ್ಟೆ ! ಸಾವನ್ನು ಗೆದ್ದರು ! ಭವದ ಬಂಧನವನ್ನೇನೂ ಗೆಲ್ಲಲಿಲ್ಲ! ಕೋಪ ತಾಪಗಳನ್ನು ಗೆಲ್ಲಲಿಲ್ಲ ! ತಮ್ಮ ಮನಸ್ಸನ್ನೇ ತಾವು ಗೆಲ್ಲಲಾಗಲಿಲ್ಲ ! ಇಂದ್ರನಾಗಲಿ , ಚಂದ್ರನಾಗಲಿ ! ಎಲ್ಲರೂ ಭವಬಂಧನದಲ್ಲಿ ಸಿಲುಕಿ ನರಳಿದವರೇನೇ ! ವಿಧಿಗೆ ಯಾರೂ ಹೊರತಲ್ಲ . ಹೇಗೋ ಅಮೃತಪಾನ ಮಾಡಿ ಸಾವು ಗೆದ್ದರಾಗದು ! ಮನಸ್ಸನ್ನು ಗೆಲ್ಲಬೇಕು ! ಮನಸ್ಸು ಹೇಳಿದಂತೆ ನಾವು ಕೇಳಬಾರದು, ನಾವು ಹೇಳಿದಂತೆ ಮನಸ್ಸು ಕೇಳುವಂತಾಗಬೇಕು. ಸತ್ಯಪಥವನ್ನು ಬಿಡದಿದ್ದಾಗ ಪರಮಪದವೇ ಲಭಿಸೀತು. ಎಂತಹಾ ಸ್ಥಿತಿಯೇ ಬಂದರೂ ಮನದ ಸ್ವಾಸ್ಥ್ಯ ತಪ್ಪಬಾರದಷ್ಟೆ. ತಪ್ಪಿದರೆ ಮುಗಿಯಿತು ಮತ್ತದೇ ಭವದ ಬಂಧನದಾಟ. ಮಾಗುವವರೆಗೆ ಮುಗಿಯದು ಇದರ ಕಾಟ ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021