ದೀಪಧೂಪಕೆ ಸಿಕ್ಕು ಹಣ್ಣು ಕಾಯ್ಗಳಿಗೊಲಿದು
ನೂಪುರದ ನಾಟ್ಯ ಸಂಗೀತಕ್ಕೆ ಸಿಕ್ಕೆ !
ಕಾಪಾಡುವಾ ದೇವ ನಶ್ವರದ ಧನಕೆಳೆಸೆ
ಪಾಪಿಗೆಲ್ಲಿದೆ ನರಕ ಜಾಣಮೂರ್ಖ//
ಭಗವಂತನು ನಮ್ಮ ದೀಪಧೂಪಾದಿಗಳಿಗಾಗಲಿ, ಹಣ್ಣು ಕಾಯಿ ಇತ್ಯಾದಿ ನೈವೇದ್ಯಾದಿಗಳಿಗಾಗಲಿ , ಅಥವಾ ನೂಪುರ ನಾದದ ನರ್ತನ , ಸುಮಧುರ ಸಂಗೀತಾದಿಗಳಿಗಾಗಲಿ , ದೇವರಿಗೆ ಅರ್ಪಿಸೋ ಕಾಣಿಕೆಗಳಿಗಾಗಲಿ ಎಂದೂ ಒಲಿಯನು. ಭಕ್ತ್ಯಾವಿರ್ಭಾವಕ್ಕೆ ಇವು ಮಾರ್ಗಗಳಿರಬಹುದು ! ಆದರೆ ಇವೇ ಭಕ್ತಿಯ ಪ್ರತೀಕಗಳಲ್ಲ ಅಥವಾ ಇವೇ ಭಕ್ತಿಯೂ ಅಲ್ಲ ! ಚಿಂತಿಸಿ ಅವನಿಗೆ ಭಕ್ತಿ ಬೇಕಷ್ಟೆ. ಆ ನಿಶ್ಚಲ ಭಕ್ತಿಯಿಲ್ಲದೇ ಏನೇ ಅರ್ಪಿಸಿದರೂ ಅದು ವ್ಯರ್ಥವಷ್ಟೆ. ಒಂದುವೇಳೆ ಕ್ಷಣಿಕವಾದ ಧನ, ಧಾನ್ಯ, ಚಿನ್ನ ಇತ್ಯಾದಿಗಳಿಗೆ ಒಲಿಯುವಂತಿದ್ದರೆ ಇಂದಿನ ಭ್ರಷ್ಟಾಚಾರಿಗಳೆಲ್ಲರೂ ಸ್ವರ್ಗವನ್ನು ಮೊದಲೇ ಕಾಯ್ದಿರಿಸಿಬಿಡುತ್ತಿದ್ದರು. ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021