ನಿನ್ನಾತ್ಮಬಲ ನಿನಗೆ ದೈವವಾಗಿರುವಾಗ
ಅನ್ಯಭಯ ಗೊಡವೆಗಳ ತೂರಿಬಿಡು ಮನವೆ
ನಿನ್ನಾಳ್ವ ಗುರು ನಿನ್ನ ಸನ್ನಡತೆಯಾಗಿರಲಿ
ಮುನ್ನಮೆಚ್ಚರದೊಳಿರು ಜಾಣಮೂರ್ಖ //
ಭಯಾನಕ ವೈರಸ್ ಇಂದು ನಮ್ಮ ಜೀವ ಹಿಂಡುತ್ತಿದೆ. ಲಕ್ಷಾಂತರ ಜೀವಗಳು ಬಲಿಯಾಗಿವೆ ! ಬಲಿಯಾಗುತ್ತಿವೆ ! ಇಂತಹಾ ಸಮಯದಲ್ಲಿ ಅನಗತ್ಯ ಭಯ ಬೇಡ. ಜಾಗ್ರತರಾಗಿರೋಣ. ಎಲ್ಲಾ ಗೊಡವೆಗಳನ್ನೂ ತೂರಿಬಿಡೋಣ. ಆತ್ಮಬಲವೇ ನಮ್ಮ ದೈವ. ಕುಳಿತು ನಿಧಾನವಾಗಿ ಯೋಚಿಸಿ. ಒಳ್ಳೆಯ ನಡತೆ ಆಲೋಚನೆಗಳಿರಲಿ ! ಧ್ಯಾನದಲ್ಲಿ ಮಗ್ನರಾಗಿ, ಸ್ವಲ್ಪ ಕಾಲವಾದರೂ ನಮ್ಮ ಆತ್ಮಸಂಗಾತಿಗಳಾಗಿರೋಣ ! ಆಗ ನಮ್ಮ ಸನ್ನಡತೆಯೇ ಗುರುವಾಗಿ ಬದುಕಿನ ಪಥ ತೆರೆದುಕೊಳ್ಳುತ್ತದೆ. ಇದೆಲ್ಲವೂ ಒಂದುಕಡೆಯಾದರೆ ಮತ್ತೊಂದೆಡೆ ಸರ್ವದಾ ಎಚ್ಚರವಿರಲಿ. ಹೆಜ್ಜೆ ಹೆಜ್ಜೆಗೆ ಎಚ್ಚರವಾಗಿರಿ. ಬಾಹ್ಯವಾದ ಮತ್ತು ಆಂತರಿಕವಾದ ಎರಡೂ ರೀತಿಯ ಎಚ್ಚರಗಳಿರಲಿ. ಏನೇ ಆಗಲಿ ಎಚ್ಚರ ತಪ್ಪಿದರೆ ತೊಂದರೆ ನಿಶ್ಚಿತ ತಾನೇ !? ಹಾಗೆಯೇ ಇಲ್ಲೂ ಕೂಡ. ಬೇರೆ ಭಯಗಳನ್ನೆಲಾ ತೂರಿಬಿಡೋಣ. ಮನೆಯಲ್ಲೇ ಇರೋಣ ! ಸುರಕ್ಷಿತವಾಗಿರೋಣ ! “ಜೀವಂ ಭದ್ರಾಣಿ ಪಶ್ಯಂತಿ” ತಾನೆ ? ಮೊದಲು ಜೀವವನ್ನು ಕಾಪಾಡಿಕೊಳ್ಳೋಣ. ಬದುಕಿನಲ್ಲಿ ಮಿಕ್ಕ ಉಪಾದಿಗಳೆಲ್ಲಾ ಇದ್ದವುಗಳೇ. ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021