ಬಡವಾದಿಬಲ್ಲಿದರು ಸಂತಾದಿ ಶರಣರಿಗು
ದುಡಿವವಗು ಮಡಿವವಗು ನೆಮ್ಮದಿಯ ಚಿಂತೆ
ಒಡನೆ ಸಿಗುವುದೆ ಬಯಸೆ ಶಾಂತಿಸಿರಿಯೆಲ್ಲರ್ಗೆ
ಕಡಿಯದಲೆ ಬಂಧನವ ಜಾಣಮೂರ್ಖ //
ಒಮ್ಮೆ ಈ ಪ್ರಪಂಚವನ್ನು ಹಾಗೇ ಗಮನಿಸಿ. ಎಲ್ಲರಿಗೂ ಶಾಂತಿ ಬೇಕು, ಎಲ್ಲರಿಗೂ ನೆಮ್ಮದಿ ಬೇಕು. ಬಡವರಾಗಲಿ , ಶ್ರೀಮಂತರಾಗಲಿ , ಸಂತರು , ಶರಣರು , ದುಡಿವವರು ವಿಪರ್ಯಾಸವೆಂದರೆ ಆಗಲೋ ಈಗಲೋ ಮರಣ ಹೊಂದೋರಿಗೂ ಕೂಡ ನೆಮ್ಮದಿಯ ಚಿಂತೆ. ಬಯಸಿದಾಕ್ಷಣ ಎಲ್ಲರಿಗೂ ಸಿಗುವಂತಹುದೇನು ನೆಮ್ಮದಿ! ಶಾಂತಿಸಿರಿ ! ಅದಕ್ಕೆ ಬಂಧನಗಳಿಂದ ಬಿಡುಗಡೆ ಹೊಂದಬೇಕು. ಎಲ್ಲಿಯವರೆಗೂ ನಾನು , ನನ್ನದೆಂಬ ಬಂಧನ ವ್ಯಾಮೋಹಾದಿಗಳು ನಮ್ಮನ್ನು ಬಂಧಿಸಿರುತ್ತವೋ ಅಲ್ಲಿಯವರೆಗೂ ನೆಮ್ಮದಿ ಮರೀಚಿಕೆಯೇ ಸರಿ ! ಎಲ್ಲವೂ ಕ್ಷಣಿಕವೆಂಬ ಭಾವ ಮನದಲ್ಲಿ ನೆಲೆಗೊಂಡಾಗ ಶಾಂತಿಸಿರಿ ನಮ್ಮದೇ ಸರಿ ! ಅಲ್ಲಿಯೂ ಇದು ನನ್ನದು ಎಂದರೆ ಆ ಶಾಂತಿಸಿರಿ ನಮ್ಮಿಂದ ದೂರವೇ! ಕೆಲವರನ್ನು ನೋಡಿ ತುಂಬಾ ಶ್ರೀಮಂತರು ! ಯಾವುದಕ್ಕೂ ಕೊರತೆಯಿರದು ! ನಮಗೆ ಯಾವುದಕ್ಕೂ ಕೊರತೆಯಿಲ್ಲ ಎಂಬ ಭಾವವೇ ಅವರ ನೆಮ್ಮದಿಯ ಅಭಾವಕ್ಕೆ ಕಾರಣವಾಗಿರುತ್ತೆ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021