ಅಂತರಂಗದ ಗುಡಿಯೊಳಿರಲು ದೈವತ್ವ ತಾ
ಸಂತನಾಗುವೆ ನೀನು ಸಂದೆಯಮದೇಕೆ !?
ಅಂತರವೆ ಸೃಷ್ಟಿಯೊಳಗೇಕತೆಯ ಕಾಣದುವೆ
ಸಂತತ್ವ ದೈವತ್ವ ಜಾಣಮೂರ್ಖ//
ದೈವತ್ವ ಎಂದರೆ ಅನಂತವಾದ ಈ ಸೃಷ್ಠಿಯಲ್ಲಿ ಭೇದವನ್ನು ಕಾಣದೇ ಇರುವುದು. ಹಾಗಾದಾಗ ದಿಟವಾಗಿ ಎಲ್ಲರೂ ಸಂತರೇ, ಶರಣರೇ . ಆದರೆ ಇಂದು ಸಂತರು, ಶರಣರೆಂದು ಕರೆಯಲ್ಪಡುವವರೆಲ್ಲರಿಗೂ ಈ ಎತ್ತರದ ಭಾವವಿರುವುದಿಲ್ಲ. ಅವರೆಲ್ಲರೂ ಸ್ವಯಂ ಘೋಷಿತ ಸಂತರುಗಳಷ್ಟೆ . ಅದೊಂದು ತರಹೆಯ ಉದರ ವೈರಾಗ್ಯ. ಇಂದು ನೀವೇ ನೋಡಿ ಎಲ್ಲರೂ ಕಾವಿಧಾರಿಗಳೇ ! ಅಷ್ಟಕ್ಕೂ ಕಾವಿ ವೈರಾಗ್ಯದ ಸೂಚಕವೆಂದು ಮಾಡಿದೋರು ನಾವೇ ತಾನೆ !? ಆದರೆ ಅನಂತ ಸೃಷ್ಟಿಯಲ್ಲಿ ತಾನೂ ಒಬ್ಬನೆಂದರಿತು ,ಜಗತ್ತಿನ ಕಲ್ಯಾಣಕ್ಕೆ, ಶಾಂತಿಗೆ ಶ್ರಮಿಸುವವರು ಮಾತ್ರ ನಿಜವಾದ ಸಂತರು, ಶರಣರು. ಅದೇ ನಿಜವಾದ ಸಂತತ್ವ. ಅದೇ ದೈವತ್ವ. ಹೃದಯದಿಂದ ಒಮ್ಮೆ ಚಿಂತಿಸಿದರೆ ಎಲ್ಲವೂ ಅರ್ಥವಾಗುತ್ತದೆ. ದೃಷ್ಟಿಯಂತೆ ಸೃಷ್ಟಿ ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021