ಬೀಜ ಮಣ್ಣೊಳು ಮೊಳೆತು ಹೂಗೊಂಡು ಬೆಳೆದು ಮಿಗೆ
ಸಾಜದೊಳ್ಫಲವಿತ್ತು ನಲಿವಂತೆ ಮಾಯೆ
ಸೋಜಿಗದ ಬದುಕಿದುವೆ ಕೊನೆಗೆ ಮಣ್ಣಿದೆ ಮತ್ತೆ
ಸಾಜಮಿದೆ ಬಾಳ್ಬಣ್ಣ ಜಾಣಮೂರ್ಖ //
ಪ್ರಕೃತಿಯೊಂದಿಗೆ ಬದುಕನ್ನು ಬಹು ಸುಂದರವಾಗಿ ಸಮನ್ವಯಿಸಬಹುದು. ಈಗ ನೀವೇ ನೋಡಿ. ಬೀಜ ಮಣ್ಣುಸೇರುತ್ತದೆ ! ಅಲ್ಲಿಯೇ ಮೊಳಕೆಯೊಡೆಯುತ್ತದೆ ! ಕಾಂಡ ಕೊನೆ ಎಲ್ಲಾ ರೂಪುಗೊಳ್ಳುತ್ತದೆ. ಹೂಬಿಟ್ಟು , ಸಹಜವಾಗೇ ಫಲಬಿಟ್ಟು ತನ್ನ ಸಿಹಿಯ ಗುಣದಿಂದ ದೇವನಿಗೆ ನೈವೇದ್ಯವಾಗಿ , ಆ ನಂತರ ಮನುಷ್ಯನನ್ನು ತಣಿಸಿ ನಲಿಯುತ್ತದೆ.ತನ್ನ ಜನ್ಮವನ್ನುಸಾರ್ಥಕ ಮಾಡೊಳ್ಳುತ್ತದೆ. ಸೋಜಿಗವೆಂದರೆ ನಾವೂ ಹೀಗೇನೆ ! ಅದು ಬಣ್ಣ ಬಣ್ಣದ ಹೂ ಬಿಟ್ಟು ನಲಿಯುತ್ತೆ ! ನಾವು ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡು ನಲಿಯುತ್ತೇವೆ. ಕೊನೆಗೆ ಸಹಜವಾಗೇ ಎಲ್ಲಾ ಬಿಟ್ಟು ಮಣ್ಣು ಸೇರುತ್ತೇವೆ. ಇಷ್ಟೇ ಬದುಕು ! ಇದೇ ಬಾಳ್ಬಣ್ಣ ! ಗೆಳೆಯಾ, ನೂರು ವರ್ಷ ಆಯಸ್ಸು ಕೊಟ್ಟಿದ್ದಾನೆ ಭಗವಂತ. ಇಷ್ಟರಲ್ಲಿ ಏನಾದರೂ ಸಾಧಿಸು ಅಂತ. ಮೇಲೆ ಕೂತು ಎಲ್ಲಾ ನೋಡ್ತಾ ಇದಾನೆ. ಏನು ನಮ್ಮ ಸಾಧನೆ ಅಂತ ಆತ್ಮಾವಲೋಕನ ಮಾಡ್ಕೋಬೇಕಾದವರು ನಾವು. ಮುಖ್ಯಪ್ರಾಣ, ಮೂಲಗುರು , ದೇವನನ್ನು ಮರೆಯಬಾರದಷ್ಟೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021