ನಾನೆನುವುದಜ್ಞಾನ ನೀನೆನಲು ಸುಜ್ಞಾನ
ತನುಭಾವವಜ್ಞಾನ ತೊರೆದು ಹೊರ ಬಾರ
ಘನನು ಗುರು ಭವದ ಕಸವೆಲ್ಲ ಸುಟ್ಟುರುಹುವನು
ಎಣೆಯೆ ಗುರು ಕರುಣೆಗೆಲೆ ಜಾಣಮೂರ್ಖ //
ಗುರು ಕಾರುಣ್ಯಕ್ಕೆ ಸಾಟಿಯೆಂಬುದೇ ಇಲ್ಲ ಈ ಜಗತ್ತಿನಲ್ಲಿ. ಹರಮುನಿಯಲ್ ಗುರು ಕಾಯ್ವನು ಎಂದು ಅಷ್ಟಲ್ಲದೇ ಹೇಳಿರುವರೇನು ಪ್ರಾಜ್ಞರು ! ಆದರೆ ನಾನೆನುವ ಅಜ್ಞಾನಿಗೆ ಗುರು ಕಾರುಣ್ಯವೆಂತು ದಕ್ಕೀತು ? ನಾನು ನಾನೆನುವುದೇ ಅಜ್ಞಾನ. ನೀನೇ , ನಿನ್ನದೇ ಎಂದು ಬದುಕೋದೇ ಸುಜ್ಞಾನ. ಈ ದೇಹ ಭಾವವನ್ನು ತೊರೆದು ಹೊರಬಾರಯ್ಯ ಗೆಳೆಯಾ.ಗುರುವು ಬಹು ಘನನು. ಭವದ ಕಷ್ಟಗಳನ್ನೆಲ್ಲ ಭಸ್ಮಮಾಡಿ ಇಷ್ಟಾರ್ಥಗಳನ್ನು ನೆರವೇರಿಸುವವನು. ಗುರು ಕರುಣೆಗೆ ಎಣೆ ಯಾವುದು ಹೇಳಿ ಈ ಜಗತ್ತಿನಲ್ಲಿ ! ಅನ್ಯಥಾ ಶರಣಂ ನಾಸ್ತಿ ಎಂದು ಬಂದವರನ್ನು ಗುರು ಎಂದೂ ಕೈ ಬಿಡನು. ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021