ಬಿತ್ತಿದೆನು ನಾ ನೀರ ಕಟ್ಟಿದೆನು ನಾನೊಡ್ಡ
ಎತ್ತಿದೀ ಹೂವೆನ್ನ ತೋಟದ್ದೆ ಎನದೆ !
ಸುತ್ತಿ ಸೂಸುವ ಗಂಧವಾರೆಂದು ಅರಿತು ನೀ
ನೆತ್ತರದಿ ಬದುಕೇಳೊ ಜಾಣಮೂರ್ಖ //
‘ನಾನು’ ಎನ್ನೋದು ನಮ್ಮಲ್ಲಿ ಎಷ್ಟು ಘನೀಭವಿಸಿದೆ ಎಂದರೆ ಬೀಜ ಬಿತ್ತಿದವನು ‘ನಾನು’ , ನೀರ ಕಟ್ಟಿದವನು ‘ನಾನು’ ಬಿಡಿಸಿ ತಂದಿರುವ ಈ ಹೂವೆನ್ನ ತೋಟದ್ದೇ ! ಎನ್ನುತ್ತೇವೆ. ಸರಿ ಬಿಡಿ ಎಲ್ಲಕ್ಕೂ ಕಾರಣ ಕರ್ತರು ನಾವಾದರೆ ಹೂವಿನೊಳಗಡಗಿದ್ದು ,ಸುಳಿದು ಸೂಸಿ ಜಗವನ್ನೆ ಸಗ್ಗವಾಗಿಸುವ ಸೌಗಂಧ ಯಾರದ್ದು !? ದುಂಬಿ ಹೀರುವ ಮಕರಂದವಾರದ್ದು !? ಗಿಡಕೆ ಸತ್ವವಿತ್ತ ನೀರೆತ್ತಣದು ? ಸತ್ವವಿತ್ತವರಾರು !? ಬೆಳೆದ ಫಲದೊಳಗೆ ಸಿಹಿಯನಿಟ್ಟವರಾರು !? ಅಷ್ಟಕ್ಕೂ ಆ ಹೂವಿನಲ್ಲಿ ನನ್ನದೆಂದು ತೋರಲು ಇರುವ ಒಂದು ಸಣ್ಣ ಕುರುಹಾದರೂ ಏನಿದೆ ! ಈ ತೆರನಾದ ಚಿಂತನೆಗಳು ಮೂಡಿದಾಗ ನಾನೆಂಬುದು ಮಾಯವಾಗುತ್ತೆ. ಇಂತಹಾ ಎತ್ತರದಲ್ಲಿ ಚಿಂತಿಸಿ ನೆಪಮಾತ್ರನು ನಾನೆಂಬ ಅರಿವಿನಲ್ಲಿ ಕರ್ಮವೆಸಗುತ್ತಾ ಸಾಗುವವನೇ ನಿಜವಾದ ಜ್ಞಾನಿ ! ಅದೇ ನಿಜವಾದ ಅರಿವು ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021