ಮನೆ ಚಂದದುದ್ಯಾನ ಒಡೆಯ ನೀನದರೋಳಗೆ
ಮನಬಂದುದನು ತುಂಬೆ ಮನೆಗೆಂತ ಶೋಭೆ ?
ಧನಿಕನೋ ಬಡವನೋ ಪರವಸ್ತು ಕಾಣದಿರೆ
ಮನೆಯದುವೆ ಪಾಳ್ಮನೆಯೊ ಜಾಣಮೂರ್ಖ//
ಮನೆಯು ಒಂದು ಚಂದದುದ್ಯಾನದಂತೆ. ನೀನು ಅದರ ಒಡೆಯ. ಅದು ಸತ್ಯ ,ಶಿವ ಸುಂದರತೆಗಳ ಆಗರವಾಗಿರಬೇಕು. ಅದು ಬಿಟ್ಟು ಬೇಡವಾದುದನ್ನೆಲ್ಲಾ ತುಂಬಿದರೆ ಮನೆಗದು ಲಕ್ಷಣವೇ ? ಬಡವರಾದರೇನು , ಶ್ರೀಮಂತರಾದರೇನು ? ಭಗವಂತನು ಕೊಳಕುತನವನ್ನು ಕೊಡುವನೇನು !? ದೇವ ಕೊಟ್ಟ ಮನೆಯಲ್ಲಿ ದೇವನೇ ಕಾಣದಿದ್ದರೆಂತು !? ಅಂತಹಾ ಮನೆ ಮನೆಯಲ್ಲ ! ನಿಜವಾಗಿ ಅದು ಪಾಳ್ಮನೆಯೇ ಸರಿ. ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021