ಬಾಲಕೇಳಿಯೊಳಜ್ಜ ಪೇಳ್ದಂತ ಕತೆಗಳವು
ಬಾಲಕರ ಬದುಕಿಂಗೆ ದಾರಿದೀಪಗಳು
ಕಾಲಸಲೆಯಲ್ಕದರ ಆಳ ತಿಳಿವುದೊ ದಿಟದಿ
ಬಾಲಿಶವೊ ಬಾಲ್ಯದೊಳು ಜಾಣಮೂರ್ಖ //
ಸ್ನೇಹಿತರೇ ಇದರ ಅನುಭವ ನಿಮಗೂ ಆಗಿಯೇ ಇರುತ್ತದೆ. ನಮಗೆ ಅಜ್ಜ , ಅಜ್ಜಿ ಹೇಳಿದ ಕತೆಗಳು ಬದುಕಿಗೆ ನಿಜಕ್ಕೂ ಒಂದು ತಿರುವನ್ನೇ ತಂದುಕೊಡುವಂತಹವು. ಆದರೇನು ನಮಗಂತೂ ಅದು ಆಟದ ವಯಸ್ಸು , ಹುಡುಗಾಟ ಅದೆಲ್ಲಾ ಲೆಕ್ಕಕ್ಕೇ ಇಲ್ಲ. ಆದರೆ ಅದರ ಸಾರ , ಆಳ ಇದೆಲ್ಲವೂ ನಮಗೆ ತಿಳಿಯೋದು ನಾವು ದೊಡ್ಡವರಾದ ಮೇಲೇನೇ ! ವಿಪರ್ಯಾಸವೆಂದರೆ ಅವರು ಹೇಳಿದ ಸತ್ಯಗಳನ್ನು ಅನುಭವಿಸಿ ಅವರೊಂದಿಗೆ ಹಂಚಿಕೊಳ್ಳೋಣವೆಂದರೆ ಆ ಹಿರಿಯರು ನಮ್ಮ ಜೊತೆ ಇರುವುದಿಲ್ಲ ! ಈ ದೈವಲೀಲೆಯೇ ಹೀಗೆ. ಹಲ್ಲಿದ್ದಾಗ ಕಡಲೆಯಿಲ್ಲ , ಕಡಲೆಯಿದ್ದಾಗ ಹಲ್ಲಿಲ್ಲ ಎನ್ನುವ ಹಾಗೆ. ಅಂದಹಾಗೆ ಬದುಕೂ ಹೀಗೇನೆ ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021