ಮುಳುಗೆದ್ದು ಬಾಳಿನೀ ದಂದುಗದೊಳದ್ದಿ ಬಲು
ತಿಳುವಿನಾ ತಳಕಿಳಿದು ಅನುಭಾವಿಯಾಗಿ !
ಕಳಿತರೇಂ! ಮಾಗಲೇಂ! ಸಂತಸವ ಮರೆತರದು
ಅಳಿಮನದ ಪರಿಯಲ್ತೆ ಜಾಣಮೂರ್ಖ //
ಈ ಬದುಕಿನ ಕಷ್ಟಗಳಲ್ಲಿ ನಾವು ಕ್ಷಣಕ್ಷಣಕ್ಕೂ ಮುಳುಗೇಳುತ್ತಿದ್ದೇವೆ.ಬದುಕಲ್ಲಿ ಎಲ್ಲವನ್ನೂ ಅನುಭವಿಸಿ ಅನುಭಾವಿಗಳಾಗುತ್ತಿದ್ದೇವೆ. ಬದುಕಿನ ಅಂತಃಸ್ಸತ್ವವನ್ನು ಬೆದಕಿ ಜ್ಞಾನಿಗಳೆನಿಸುತ್ತೇವೆ. ಇಷ್ಟೆಲ್ಲಾ ಆದರೂ ಸಂತೋಷದಿಂದ ಬದುಕುವುದನ್ನು ಮಾತ್ರ ಮರೆಯುತ್ತೇವೆ. ಒಂದು ರೀತಿಯ ಭ್ರಮೆಯಲ್ಲೇ ಬದುಕುತ್ತೇವೆ. ಮನಸ್ಸು ಮಾತ್ರ ಚಂಚಲಗೊಳ್ಳುತ್ತಲೇ ಹೋಗುತ್ತದೆ. ಅದಕ್ಕೆ ತೃಪ್ತಿಯೆಂಬುದೇ ಇಲ್ಲ. ಆತ್ಮಜ್ಞಾನಿಯಾಗಿ ಅಂತರಂಗವನ್ನೊಮ್ಮೆ ಅವಲೋಕಿಸದೆ ಬಾಹ್ಯಾಡಂಬರ , ಬಾಹ್ಯ ಪ್ರಪಂಚಕ್ಕೆ ಸೋತಾಗ ಎಷ್ಟು ಜ್ಞಾನಿಯಾದರೇನು ಬಂತು ? ಸ್ವಲ್ಪ ಚಿಂತಿಸೋಣ. ಬಾಲಿಶ ಪ್ರವೃತ್ತಿಗಳನ್ನು ಬಿಟ್ಟು ಪ್ರಾಜ್ಞರಾಗಬೇಕಿದೆ. ಅರಿವಿನ ಆಭರಣ ಅಂತರಂಗದಲ್ಲಿ ಶೋಭಿಸಿದಾಗ ಮಾತ್ರ ಅದರ ಸೊಗಸು ಹೆಚ್ಚು ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021