ತೊಡಕಿಂಗೆ ಮಿಡುಕಿ ಬಲು ಕೊರಗೆ ಪರಿಹಾರಮೇನ್ ?
ತೊಡಕಿದ್ದರಿರಲಿ ಬಿಡು ಅದರ ಪಾಡದಕೆ !
ತೊಡಕಿನೊಳಗರಳೇಳು
ಬದುಕ ತೊಡಕಾಗಿಸದೆ !
ತೊಡಕಿನೊಳು ತೊಡಕೇಕೊ ಜಾಣಮೂರ್ಖ//
ನೋಡಿ ಹುಟ್ಟದಾಗಿನಿಂದ ಸಾಯುವ ವರೆಗೆ ಸಮಸ್ಯೆಗಳು ಇದ್ದವುಗಳೇ ! ಒಂದಾದ ಮೇಲೊಂದು ! ನಮ್ಮ ಸಮಸ್ಯೆಗಳಿಗೆ ಕೊನೇನೇ ಇಲ್ಲ ! ಆ ದೇವರಿಗೆ ನಮ್ಮ ಮೇಲೆ ಸ್ವಲ್ಪವೂ ಕರುಣೇನೇ ಇಲ್ಲ ಎನ್ನುತ್ತೇವೆ , ಮತ್ತೆ ನಾವೇ ಸಮಸ್ಯೆಗಳ ಒಳಗೆ ಬೀಳುತ್ತೇವೆ. ಪಾಪ ದೇವರದೇನು ತಪ್ಪು !? ಸಮಸ್ಯೆಗಳ ಒಳಗೇ ಬದುಕು ಅರಳಬೇಕೇ ಹೊರತು ಬದುಕೇ ಒಂದು ಸಮಸ್ಯೆಯಾಗಬಾರದು! ಸಮಸ್ಯೆಯ ಒಳಗೇ ಮತ್ತೊಂದು ಸಮಸ್ಯೆ ಮಾಡಿಕೊಂಡು ಒದ್ದಾಡುವುದಕ್ಕಿಂತ ಬದುಕನ್ನು ಸರಳವಾಗಿ ,ಶಾಂತವಾಗಿ ಮತ್ತೆ ನಿರ್ಮಲವಾಗಿ ಕಳೆಯೋಣ. ಸಮಸ್ಯೆ ನಮ್ಮೊಬ್ಬರದೇ ಅಲ್ಲ ! ಜಗತ್ತಿನಲ್ಲಿ ಎಲ್ಲರಿಗೂ ಇದೆ. ನಾವು ಮೊದಲು ಮುಕ್ತರಾಗಿ ಮುಕ್ತಿಯ ದಾರಿಯನ್ನು ಎಲ್ಲರಿಗೂ ತೋರೋಣ ! ಜಗತ್ತೇ ಸಂತಸಮಯವಾಗಿರಲೆಂದು ಹಾರೈಸೋಣ. ಬದುಕನ್ನು ಸುಂದರ ನಂದನವಾಗಿಸೋಣ. ನಾಲ್ಕು ದಿನದ ಬದುಕಲ್ಲಿ ಸ್ವಾರ್ಥವನ್ನು ತೊರೆದು “ಲೋಕಾ ಸಮಸ್ತಾ ಸುಖಿನೋ ಭವಂತು ” ಎನ್ನೋಣ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021