ನೋಡಲಿಹ ಕಣ್ಣಿನಿಂ ನೋಡಿದೇನನು ಮಣ್ಣ ?
ನೋಡುವುದ ನೋಡದಲೆಯಾಡಿದೆಯೊ ಅಣ್ಣ !
ಹಾಡಿ ನಲಿಯದೆ ಬರಿದೆ ಕೂಡಿ ವಿಷಯಂಗಳಲಿ
ನೋಡುವುದ ಮರೆತಲ್ಲೊ ಜಾಣಮೂರ್ಖ //
ಸೃಷ್ಟಿಯ ತುಂಬಾ ಭಗವಂತನ ಇರುವಿಕೆಯನ್ನು ನಾವು ಗುರ್ತಿಸಬಹುದಾದರೂ ಗುರ್ತಿಸುತ್ತಿಲ್ಲ ! ನೋಡೋದಕ್ಕೆ ಅಂತ ಕಣ್ಣು ಕೊಟ್ಟಿದ್ದಾನವನು. ಒಂದಲ್ಲ ಅಂತ ಎರಡು. ಬಾಹ್ಯದಲ್ಲಿರೋದು. ದೈಹಿಕವಾದದ್ದು. ಹೃದಯದ ಕಣ್ಣೂ ಇದೆ ತಾನೆ !? ಅದರಿಂದ ನಾವು ನೋಡೋದೇ ಇಲ್ಲ. ಐಹಿಕ ಭೋಗಭಾಗ್ಯಗಳ ಛಾಯೆಯಲ್ಲಿ ಮುಚ್ಚಿಹೋಗಿದ್ದೇವೆ. ಹಾಡಿ ನಲಿಯದೆ ವಿಷಯಗಳ ಬಲೆಗೆ ಸಿಲುಕಿ ಬೆಂಡಾಗುತ್ತಿದ್ದೇವೆ. ನಮ್ಮೊಡನೆಯೇ ಇರುವ ಭಗವಂತನ ಪ್ರಭೆಯನ್ನು ಗುರ್ತಿಸದವರಾಗಿದ್ದೇವೆ. ಅವನನ್ನು ನೋಡುವುದನ್ನೇ ಮರೆತಿದ್ದೇವೆ. ಇನ್ನಾದರೂ ಜಾಗೃತರಾಗಬೇಕಿದೆ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021