ನಡೆವ ದಾರಿಗೆ ಮನೆಯನಡ್ಡ ಕಟ್ಟುವರೇನು ?
ಸಡಗರದಿ ಬಾಳ್ಪಥದಿ ಮರೆತು ಬಾಳುವರೆ !?
ತಡೆವೊಡೆದ ನೀರಿನೊಲು ನುಗ್ಗಲೇನಾಯ್ತು ಮಿಗೆ
ಅಡರಾಸಿ ಕೆಡದಿರೆಲೊ ಜಾಣಮೂರ್ಖ //
ದಾರಿ ಇರುವುದು ಏಕೆ ಹೇಳಿ !? ನಡೆದಾಡೋದಕ್ಕೆ ತಾನೆ ? ಅಂತಹಾ ದಾರಿಯಲ್ಲಿ ಮನೆ ಕಟ್ಟಿ ವಾಸ ಮಾಡಲಾದೀತೆ ? ಹಾಗೇನೇ ಬದುಕಿನ ದಾರಿ ಕೂಡ. ಅಲ್ಲಿ ದಾರಿತಪ್ಪಿದರೆ ಮುಗಿಯಿತು. ಬದುಕೇ ಅಸ್ತವ್ಯಸ್ತವಾಗುತ್ತದೆ. ಏನೇ ಸಾಧನೆಗೈದರೂ ಎಲ್ಲವೂ ವ್ಯರ್ಥ ! ಅದಕ್ಕೆ ಅಣೆಕಟ್ಟು ಒಡೆದ ನೀರಿನಂತೆ ಗೊತ್ತುಗುರಿ ಇಲ್ಲದೆ ನುಗ್ಗಬಾರದು. ಆತುರಾತುರವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳಬಾರದು. ಇದರಿಂದ ಬರೀ ಅನರ್ಥವಷ್ಟೆ. ಧರ್ಮದ ದಾರಿಯಲ್ಲಿ ನಡೆದು ಸತ್ಯದರ್ಶನ ಮಾಡಬೇಕು. ಆಗಲೇ ಬದುಕು ಸಾರ್ಥಕ.ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021