ಬಾಳಕಾವ್ಯದಿ ಬರುವುದೆಂತೆಂತ ಪಾತ್ರ ಸಂ
ಬಾಳಿಸೆಲ್ಲವ ನಗುತ ತುಂಬಿರಲಿ ಮಿಡಿತ
ಕೇಳು ಪಾತ್ರವದಚಿರವೆಂಬರಿವು ಒಳಗಿರಲಿ
ಪಾಳಿ ಬರೆ ನಿರ್ಭಯವೊ ಜಾಣಮೂರ್ಖ //
ಈ ಬದುಕೊಂದು ಸುಂದರ ಕಾವ್ಯ. ಅದೆಷ್ಟು ಪಾತ್ರಗಳನ್ನೋ ನಿರ್ವಹಿಸುತ್ತೇವೆ ನಾವು ಇದರಲ್ಲಿ. ಎಲ್ಲ ಪಾತ್ರಗಳನ್ನೂ ಸಂತೋಷದಿಂದ ಸಂಬಾಳಿಸಬೇಕು. ಹಸುಳೆಯಾಗಿ , ಬಾಲ್ಯ , ಯೌವನ , ವೃದ್ಧಾಪ್ಯ ಹೀಗೆ ಬಹಳಷ್ಟು ಹಂತಗಳಲ್ಲಿ ತಂದೆಯಾಗಿ , ತಾಯಿಯಾಗಿ , ಮಗಳಾಗಿ , ಮಗನಾಗಿ , ಅತ್ತಿಗೆ , ನಾದಿನಿ , ಓರಗಿತ್ತಿ , ಬಾವ ಭಾಮೈದುನ ,ತಾತ , ಅಜ್ಜಿ ಇವೇನು ಒಂದೇ ಎರಡೇ ಅನಂತ ಸಂಬಂಧಗಳು ! ಆದರೆ ನಮ್ಮ ಪಾತ್ರವನ್ನು ನಾವು ಚನ್ನಾಗಿ ನಿರ್ವಹಿಸಬೇಕು. ಸಾಧ್ಯವಾದರೆ ಸಂತೋಷವನ್ನೀಯೋಣ. ದುಃಖವನ್ನಂತೂ ಕೊಡುವುದು ಬೇಡ. ಆದರೆ ಒಂದು ಅರಿವು ಆಂತರ್ಯದಲ್ಲಿ ಸ್ಥಿರವಾಗಿರಲಿ. ಅದೇನೆಂದರೆ ಈ ಪಾತ್ರ ಚಿರವಲ್ಲ ! ಈ ಪಾತ್ರದ ವೇಷವನ್ನು ಕಳಚಲೇಬೇಕು. ಮುಂದೆ ನಾನೊಂದು ಆತ್ಮರೂಪಿಯಷ್ಟೆ ಎಂಬ ಅರಿವು ಇರಲಿ. ಪಾತ್ರ ಕಳಚುವ ನಮ್ಮ ಪಾಳಿ ಬಂದಾಗ ಎಷ್ಟು ಸ್ವಾಭಾವಿಕವಾಗಿ ಬಂದೆವೋ ಅಷ್ಟೇ ಸ್ವಾಭಾವಿಕವಾಗಿ , ಸಂತೋಷವಾಗಿ ಹೊರಟು ಬಿಡೋಣ. ಈ ಅರಿವಿದ್ದಾಗ ಭಯವೇ ಇರುವುದಿಲ್ಲ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021