ಬಿತ್ತರದ ಕಡಲು ಬಲು ವಿಸ್ಮಯದ ಒಡಲಂತೆ
ಮತ್ತದರ ಆಳದೊಳಗೆಂತ ಬಡಬಾಗ್ನಿ !
ಸುತ್ತೇಳು ಲೋಕದೊಳಗಂತೆ ಸತ್ಯವೊ ಜಾಣ !
ಮತ್ತೆ ಮೇಲೆಮ್ಮ ಬಾಳ್ ಜಾಣಮೂರ್ಖ //
ಸಮುದ್ರವನ್ನು ಎಲ್ಲರೂ ನೋಡಿದ್ದೇವಲ್ಲಾ ! ಅದೆಷ್ಟು ಅಗಾಧ ! ಗಂಭೀರ ! ಶಾಂತ ! ರಮಣೀಯ ! ರೌದ್ರ ! ಭಯಾನಕ ! ಅದ್ಭುತ ! ಅಬ್ಬಾಬ್ಬಾ , ಯಾವ ರೀತಿಯಲ್ಲಿ ಅದನ್ನು ಬಣ್ಣಿಸೋದು ! ಮೇಲೆ ತಣ್ಣಗಿನ ನೀರು ! ಒಡಲೊಳಗೆ ಬಡಬಾಗ್ನಿ ! ಆಳಕ್ಕೆ ಯಾರೂ ಹೋಗರು ! ನಮ್ಮ ಊಹೆಯನ್ನು ಮೀರಿದ ಬೆಂಕಿ ! ಎಂತಹಾ ವಿಚಿತ್ರ ಈ ದಿವ್ಯ ಭವ್ಯ ಸುಂದರ ಪ್ರಕೃತಿ ! ದೈವಸೃಷ್ಟಿ ! ಹಾಗೆಯೇ ಸುತ್ತೇಳು ಲೋಕದಲ್ಲಿರುವ ಸತ್ಯ ! ಅದರ ಮೇಲೆ ನಮ್ಮ ಬದುಕು ಅರಳುತ್ತಿದೆ. ಆದರೆ ಸತ್ಯದ ಆಳವನ್ನು ಯಾರೂ ನೋಡುತ್ತಿಲ್ಲ ! ಅಲ್ಲಿಗೂ ಯಾರೂ ಹೋಗರು ! ಸತ್ಯದ ಜೊತೆಗೇ ಬದುಕಾದರೂ ಸತ್ಯವನ್ನು ಮಾತ್ರ ಯಾರೂ ಕಾಣರು ! ಅದರೆಡೆಗೆ ಸಾಗುವ ಧೈರ್ಯ ಮಾಡರು ! ಮೇಲಿನ ಮಿಥ್ಯಕ್ಕೇ ಮನಸೋಲುವರು ! ಇದು ವಿಚಿತ್ರ ಆದರೂ ಸತ್ಯ ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021