Write to us : Contact.kshana@gmail.com

ಕಾವಂಗು ಕಟ್ಟಳೆಯೆ !

0
(0)

ನೋವುಂಡು ನಗುವವಗೆ ನೋವೆ ಈ ಜಗದಲ್ಲಿ
ಭಾವನೆಗೆ ಬೆಲೆಯಿರದ ಬೆಂಗಾಡಿನಲ್ಲಿ !
ದೇವನೇಕವತರಿಸಿ ಬಾರನೋ ಕಾಣೆ ನಾ
ಕಾವಂಗು ಕಟ್ಟಳೆಯೆ ಜಾಣಮೂರ್ಖ//

ಇದೊಂತರಾ ವಿಚಿತ್ರ ಪ್ರಪಂಚ ! ಯಾರು ಸತ್ಯ ಧರ್ಮ ಅಂತ ನೋವು ತಿನ್ನೋದಕ್ಕೆ ಸಿದ್ಧನಿರುತ್ತಾನೋ ಅವನಿಗೆ ನೋವುಗಳ ಸರಮಾಲೆ ! ನೋವುಣ್ಣುವವನು ಸದಾ ನೋವನ್ನು ಸಹಿಸುತ್ತಾ ಹೊರಗೆ ನಗುತ್ತಾ ಒಳಗೆ ದುಃಖಿಯೇ ಆಗಿರುತ್ತಾನೆ. ಆರ್ದ್ರವಾದ ಮೃದು ಮನೋಭಾವನೆಗಳಿಗೆ ಇಲ್ಲಿ ಬೆಲೆಯೇ ಇಲ್ಲ ! ಶುಷ್ಕವಾದ , ಬರಡಾದ ಬೆಂಗಾಡಿದು ! ಅನ್ಯಾಯ ಗೈದವನು ರಾಜಾರೋಷವಾಗಿ ವಿಕೃತ ಸಂತೋಷದಲ್ಲಿ ಬದುಕುತ್ತಿರೋ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇವೆ ! ಹೇಳುವವರೂ ಕೇಳುವವರೂ ಇರದ ಸರ್ವಾಧಿಕಾರಿ ಪ್ರಪಂಚವಾಗಿದೆ ! ಇಷ್ಟಾದರೂ ದೇವನೇಕವತರಿಸಿ ಬರುತ್ತಿಲ್ಲ ಎಂಬುದೇ ಯಕ್ಷಪ್ರಶ್ನೆ ! ಸಂಭವಾಮಿ ಯುಗೇ ಯುಗೇ ಅಂತ ಪ್ರಮಾಣಗೈದವನು ತಾನೇ ಅವನು !! ಮತ್ತೇಕೆ ತಡ ಮಾಡುತ್ತಿದ್ದಾನೋ ಕಾಣೆ! ಅವನ ಲೋಕದಲ್ಲೂ ಏನಾದರೂ ಕಾನೂನು ಕಟ್ಟಳೆಯ ತೊಡಕಿರಬಹುದೇ !? ಕಾವ ದೇವನಿಗೂ ಕಟ್ಟಳೆಯ ತೊಡಕೇ !? ಅವನೇ ಬಂದು ಉತ್ತರಿಸಬೇಕು. ಸತ್ಯದ ಪುನರುತ್ಥಾನವಾಗಬೇಕು ! ಅಸತ್ಯ , ಅನ್ಯಾಯದ ಘಾಟಿನಿಂದ ಮಲಿನಗೊಂಡ ಜಗತ್ತು ಭಗವಂತನ ಅವತಾರದಿಂದ ಶಾಂತವಾಗಬೇಕಿದೆ ! ಅಲ್ಲವೇ ಗೆಳೆಯರೇ !?

How do you like this post?

Click on a star to rate it!

Average rating 0 / 5. Vote count: 0

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಶ್ರೀ ಮುರಳೀಧರ ಹೆಚ್ ಆರ್
Latest posts by ಶ್ರೀ ಮುರಳೀಧರ ಹೆಚ್ ಆರ್ (see all)

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಧರ್ಮಸೂಕ್ಷ್ಮ – ಕರ್ಮಸೂಕ್ಷ್ಮ