ಹೂವರಳಿ ಪರಿಮಳವ ಪಸರಿಸುವ ಪರಿಯಂತೆ
ದೇವನಡಿಗೆರಗಿ ಬಾಳ್ ಸಫಲಗೊಳ್ವಂತೆ
ಭಾವ ಬಜಿಪುದಕಿರಲು ಒಳಿತಗೈಲಿರೆ ತನುವು
ಸೇವೆಗೈ ಭಜಿಸೇಳೊ ಜಾಣಮೂರ್ಖ //
ಹೂವಿನ ಬದುಕೇ ಧನ್ಯ. ಮುಂಜಾನೆಯೇ ಅರಳಿ ಪರಿಮಳವ ಪಸರಿಸಿ ಸತ್ತೆಲ್ಲ ಪರಿಸರವನ್ನು ಸುಗಂಧಮಯವಾಗಿಸಿ ಅಂತೆಯೇ ಭಗವಂತನ ಅಡಿಗೆ ಬಿದ್ದು ತನ್ನ ಬದುಕನ್ನು ಸಾರ್ಥಕ ಮಾಡಿಕೊಳ್ಳುವಂತೆ ನಮ್ಮ ಬದುಕಿರಬೇಕು. ಅದಕ್ಕೆಂದೇ ಈ ಶರೀರ ಮತ್ತೆ ಭಾವನೆಗಳಿರುವುದು. ಭಾವ ಭಜಿಸುವುದಕ್ಕೆ , ಶರೀರ ಒಳಿತಗೈಯ್ಯುವುದಕ್ಕೆಂದೇ ಇರುವುದು. ಆದರೆ ಅದನ್ನು ಏನೇನಕ್ಕೋ ಅನರ್ಥಕ್ಕೆಲ್ಲಾ ಬಳಸುತ್ತೇವೆ. ಸೇವೆಗಾಗಿ ಶರೀರವನ್ನೂ ಭಜಿಸುವುದಕ್ಕಾಗಿ ಭಾವವನ್ನೂ ಬಳಸಿ ಧನ್ಯರಾಗಬೇಕು. ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು.
ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021