ಸಂತಸವ ನೀಳ್ಪುದೇ ಸತ್ಕರ್ಮ ಕೇಳು ಮಿಗೆ
ಯಂತೆ ದುಃಖವನೀಯಲದುವೆ ದುಷ್ಕರ್ಮ
ಪಿಂತೆ ಸಂತರ ಪಥವನನುಭವಿಸು ಸಾಗು ನಡೆ
ಸಂತಸದ ಬೀಡು ಬಾಳ್ ಜಾಣಮೂರ್ಖ //
ಇತರರಿಗೆ ಸಂತೋಷವನ್ನೇ ನೀಡು. ಅದೇ ಸತ್ಕರ್ಮ. ದೇವನಿಗೆ ಬಲು ಇಷ್ಟವಾದ ಮಾರ್ಗ. ದುಃಖ ನೀಡಿದರೆ ಅದೇ ದುಷ್ಕರ್ಮ ! ಈ ಕರ್ಮವನ್ನು ಯಾರೂ ಬಯಸರು. ವಿಪರ್ಯಾಸವೆಂದರೆ ಎಲ್ಲರೂ ಇದೇ ಮಾರ್ಗವನ್ನು ಅನುಸರಿಸುತ್ತಿರುವುದು ! ಅಲ್ಲವೇ !? ಹಿಂದೆ ಈ ಭುವಿಯಲ್ಲಿ ಬದುಕಿದ ಸಾಧುಸಂತರು ಜಗತ್ತಿನ ಶಾಂತಿಗಾಗಿ ಬದುಕಿದ , ಅನುಸರಿಸಿದ ಮಾರ್ಗವನ್ನೇ ಅನುಭವಿಸಿ ಅನುಸರಿಸಬೇಕಯ್ಯ ಗೆಳೆಯ. ಆಗ ಬದುಕು ಸಂತಸದ ಬೀಡಾಗುತ್ತದೆ. ಈ ಬದುಕು ಸತ್ಯ ಸಾಕ್ಷಾತ್ಕಾರಕ್ಕೆ ದಾರಿ ಮಾಡಿಕೊಟ್ಟು , ಶಿವಾನುಭವವನ್ನು ನೀಡಿ ಬದುಕಿನ ಸೌಂದರ್ಯವನ್ನು ಕಂಡು ಅನುಭವಿಸಲು ದಾರಿ ಮಾಡಿಕೊಡುತ್ತದೆ. ಇದರಲ್ಲಿ ಸಂದೇಹವೇ ಇಲ್ಲ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021