ಮಲಿನಗೈಯ್ಯೊಳು ಮುಟ್ಟೆ ಮಲಿನವೈ ಜಗವೆಲ್ಲ
ಮಲಿನ ಮನದಿಂ ಮಲಿನ ಸುಂದರದ ಬದುಕು !
ಮಲಿನಾರ್ಜಿತವು ಮಲಿನಗೊಳಿಪುದೈ ಈ ಬಾಳ
ಮಲಿನ ಭಾವವ ತೊರೆಯೊ ಜಾಣಮೂರ್ಖ //
ಕೊಳೆಯಾದ ಕೈಯಿಂದ ಏನನ್ನು ಮುಟ್ಟಿದರೂ ಅದೂ ಕೊಳೆಯಾಗುತ್ತದೆ. ಹಾಗೆಯೇ ಮಲಿನವಾದ ಮನಸ್ಸಿನಿಂದ ಸುಂದರವಾದ ಬದುಕೂ ಸಹ ಮಲಿನವಾಗುತ್ತದೆ. ಹಾಗೇನೇ ನಮ್ಮ ಸಂಪಾದನೆ ! ಅನ್ಯಾಯದ ಸಂಪಾದನೆಯಾಗಬಾರದು. ಅಂತಹಾ ಸಂಪಾದನೆ ನಮ್ಮ ಬದುಕನ್ನೇ ಮಲಿನಗೊಳಿಸಿಬಿಡುತ್ತದೆ. ಆದ್ದರಿಂದ ಮಲಿನ ಮನೋಭಾವವನ್ನು ತೊರೆದರೆ ಸುಂದರ ಬದುಕನ್ನು ಕಟ್ಟಿಕೊಳ್ಳಬಹುದು. ಮಲಿನ ಭಾವವು ಒಂದು ರೀತಿಯ ಶಾಪವಿದ್ದಂತೆ ! ಇದರಿಂದ ಹೊರಬಂದು ಶಾಂತವಾಗಿ ಬದುಕಬೇಕು. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021