ಬಡವನಿಗೆ ಬಹ ನಿದಿರೆ ಸಿರಿವಂತಗೇಕಿಲ್ಲ !
ದುಡಿದ ದಣಿದವ ನಿಜದಿ ನಿದಿರೆ ದಣಿಯಯ್ಯ !
ಕಡವರದ ತಲ್ಪ ಕೊಳೆ ನಿದಿರೆ ಕೊಳಲಾಗುವುದೆ
ಸಡಗರದಿ ದುಡಿದು ಬಾಳ್ ಜಾಣಮೂರ್ಖ //
ಈಗ ನೀವೇ ನೋಡಿ. ಬಡವನೊಬ್ಬನಿಗೆ ತನ್ನ ಗುಡಿಸಲಿನಲ್ಲಿ ಬರುವ ನಿದ್ರೆಯು ಶ್ರೀಮಂತನಿಗೆ ತನ್ನ ಅರಮನೆಯಲ್ಲಿ ಬರುವುದಿಲ್ಲ. ಇವನು ಮೈಮುರಿದು ದುಡಿದಿರುತ್ತಾನೆ ! ದುಡಿವವನು ನಿದಿರೆಯ ದಣಿ ಎಂದರೆ ತಪ್ಪಾಗಲಾರದು. ಶ್ರೀಮಂತನು ಬಂಗಾರದ ತಲ್ಪ(ಮಂಚ)ವನ್ನೇ ಮಾಡಿಸಬಹುದು! ಆದರೆ ನಿದ್ರೆಯನ್ನು ಕೊಂಡು ತರಲಾದೀತೆ !? ನಿದಿರೆಯಿಲ್ಲದೆ ಬಳಲುವವನಿಗೆ ಶಾಂತಿಯೆಲ್ಲಿಯದು !? ದುಡಿದು ಕಣ್ತುಂಬ ನಿದ್ರಿಸುವವನು ನಿಜವಾಗಿ ನಿದಿರೆಯ ದಣಿ ! ಆದ್ದರಿಂದ ದುಡಿದು ಸಡಗರ ಸಂತೋಷದಿಂದ ಬದುಕಬೇಕು. ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021