ಏಳೇಳು ವಿಶ್ವವಿದ್ಯಾಲಯದಿ ಕಲಿತೊಡೇಂ
ಬಾಳಿನೇಳ್ಬೀಳ್ಗಳಿಗೆ ಅಳುಕಿದಾ ಮೇಲೆ
ಬಾಳ ವಿದ್ಯಾಲಯದಿ ಕಲಿವ ಪಾಠವೆ ಮೇಲು
ತಾಳಿಕೆಯ ಪಾಠವದು ಜಾಣಮೂರ್ಖ//
ಓದಿಗೆ ಕೊನೇನೇ ಇಲ್ಲ ಬಿಡಿ. ಎಷ್ಟು ಬೇಕಾದ್ರೂ ಓದಬಹುದು. ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಹತ್ತಾರು ಪದವಿಗಳನ್ನು ಪಡೆದು ಪದವೀಧರರಾಗುವ ನಾವು ಬದುಕಿನ ಏಳು ಬೀಳುಗಳನ್ನು ಕಂಡು ತುಂಬಾ ಹೆದರುತ್ತೇವೆ. ಹಾಗಾಗಿಬಿಟ್ಟರೆ ! ಹೀಗಾಗಿಬಿಟ್ಟರೆ ಅಂತ ಗಾಬರಿ ಪಡುತ್ತೇವೆ, ಏನೇನೋ ಕಲ್ಪಿಸಿಕೊಳ್ಳುತ್ತೇವೆ ! ಆದರೆ ಸತ್ಯ ಏನು ಗೊತ್ತೆ ಗೆಳೆಯರೇ !? ವಾಸ್ತವ ಬದುಕು ನಮ್ಮ ಕಲ್ಪನೆಯಷ್ಟು ಕಠಿಣವಾಗಿರೋದಿಲ್ಲ ! ಸ್ವಲ್ಪ ಯೋಚಿಸಿ ! ಹೌದು ತಾನೆ !? ಈ ಬದುಕೆಂಬುದು ಉಳಿದೆಲ್ಲ ವಿಶ್ವವಿದ್ಯಾಲಯಗಳಿಗಿಂತ ಒಂದು ದೊಡ್ಡ ವಿಶ್ವವಿದ್ಯಾಲಯ ! ತಾಳ್ಮೆಯೇ ಇಲ್ಲಿನ ಪಾಠ ! ಬಾಳ ಕಷ್ಟಗಳೇ ಪರೀಕ್ಷೆ ! ಲಿಖಿತ ಒರೆಗಳಿಲ್ಲ ಇಲ್ಲಿ , ಬರೀ ಪ್ರಾಯೋಗಿಕ ಪರೀಕ್ಷೆ ಮಾತ್ರ ! ಇಂದಿನ ವಿಶ್ವವಿದ್ಯಾಲಯಗಳಲ್ಲಿ ಕಲಿತು ಹತ್ತಾರು ಪದವಿಗಳನ್ನು ಪಡೆದರೂ ಬದುಕಿನಲ್ಲಿ ಅನುತ್ತೀರ್ಣರಾಗುತ್ತಿರುವ ಎಷ್ಟೋ ಜನರನ್ನು ನೋಡುತ್ತಿದ್ದೀವಿ ಅಲ್ಲವೇ !? ಅದಕ್ಕೇ ನಮ್ಮ ಹಿರಿಯರು ಹೇಳೋರು -“ಓದು ಒಕ್ಕಾಲು ಬುದ್ಧಿ ಮುಕ್ಕಾಲು ” ಅಂತ. ಎಷ್ಟು ಸತ್ಯ ಅಲ್ಲವೇ ಈ ಮಾತು !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021