ಶಿವದಿಟ್ಟು , ಕತೆಕೇಳ್ದು ಭವವ ಗೆಲದಿರ್ದೊಡದು
ಶವಕಿಕ್ಕಿದಾಭರಣದೊಲುವೆ ಮರೆಯದಿರು
ಕವಡುತನದಿಂ ಬ್ರಹ್ಮಬಾಳ ಹೊಲಗೆಡಿಸಿ ಬಲು
ಶಿವನಾಮ ಜಪಿಸಲೇಂ ಜಾಣಮೂರ್ಖ//
ಶಿವಪಂಚಾಕ್ಷರಿಯ ಬಿಡದೆ ಜಪಿಸುತ್ತಾ , ಶಿವದಿಡುತ್ತಾ , ಶಿವಕತೆಯ ಕೇಳುತ್ತಾ ಬದುಕಿನ ಮಾಯಾಪಾಶವನ್ನು ಗೆಲ್ಲದಿದ್ದರೆ ಅದು ಶವಕ್ಕೆ ಇಟ್ಟ ಆಭರಣದಂತೆ ! ಅದಕ್ಕೆ ಮಾಡಿದ ಅಲಂಕಾರದಂತೆ ಅಷ್ಟೆ ! ಈ ಬದುಕು ಸಾಮಾನ್ಯವಾದುದಲ್ಲ ! ಬ್ರಹ್ಮಬಾಳು ! ಭಗವಂತನು ನೀಡಿದ ದಿವ್ಯವಾದ , ಅಮೂಲ್ಯವಾದ ಉಡುಗೊರೆ ! ಇದನ್ನು ಕಾಮಕ್ರೋದಾದಿ ಅರಿಷಡ್ವರ್ಗಗಳಿಂದಲೂ , ಅಷ್ಟಮದಗಳಿಂದಲೂ , ಕೃತ್ರಿಮಗಳಿಂದಲೂ ಹೊಲಗೆಡಿಸಿದರೆ ನಷ್ಟ ಯಾರಿಗೆ ಹೇಳಿ ! ಮೇಲಿನ ಎಲ್ಲವನ್ನೂ ಮನದಲ್ಲಿ ತುಂಬಿಕೊಂಡು ಶಿವನಾಮ ಜಪಿಸಿದರೆ ಯಾವ ಫಲವೂ ಇಲ್ಲ ಕಣಯ್ಯ ಗೆಳೆಯ ! ಬರೀ ಬಾಹ್ಯದಲ್ಲಿ ವೈರಾಗ್ಯ ಮೂರ್ತಿಯಂತೆ ಕಂಡರಾಯ್ತೇನು ಅಂತರಂಗದ ಕತೆ ಹೇಗೆ ? ಬ್ರಹ್ಮಬಾಳಲ್ಲಿ ಬಹಿರಂಗ ಶುದ್ಧಿಯೂ ಬೇಕು, ಅಂತರಂಗ ಶುದ್ಧಿಯೂ ಬೇಕು. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021