ಹಸಿವೊಳಿಲ್ಲದ ಮೇಲೆ ಮೃಷ್ಟಾನ್ನವೇಕೆ ಬಲು
ಉಸಿರ ಬಸಿವಾಗಿರದ ವ್ಯರ್ಥಾರ್ಥವೇಕೆ!
ಕಸುವಿರದ ಮಾತೇಕೆ ? ಹುಸಿವ ಬಂಧವದೇಕೆ ?
ಪಿಸುಣತನವೇಕೆ ಬಿಡು ಜಾಣಮೂರ್ಖ //
ನಮ್ಮ ಜೀವನದಲ್ಲಿ ವ್ಯರ್ಥವಾದವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಡುವುದೇ ಒಳಿತು. ಈಗ ನೀವೇ ನೋಡಿ. ನಮಗೆ ತಡೆಯಲಾರದಷ್ಟು ತುಂಬಾ ಹಸಿವಾಗಿದೆ ಎಂದಿಟ್ಟುಕೊಳ್ಳೋಣ ! ಅಂತಹಾ ವೇಳೆಯಲ್ಲಿ ಮೃಷ್ಟಾನ್ನದ ಚಿಂತೆಯೇ !? ನಮಗೆ ಹಣ ಬೇಕು. ಉಸಿರು ಬಸಿದು ದುಡಿಯುತ್ತಿದ್ದೇವೆ ! ಆಗ ಸಿಗದ ಹಣ ಬೇಡವಾದಾಗ ಅಥವಾ ನಮ್ಮ ಬಳಿ ಸಾಕಷ್ಟು ಹಣವಿರುವಾಗ ಸಿಕ್ಕರೆ ಏನು ಪ್ರಯೋಜನ ಹೇಳಿ !? ಅಲ್ಲವೇ ? ಹಾಗೆಯೇ ಮಾತಿನಲ್ಲಿ ತೂಕವಿರಬೇಕು. ಎಂದೂ ತೂಕ ತಪ್ಪಬಾರದು. ಕೆಲಸಕ್ಕೆ ಬಾರದ ಮಾತಿನಿಂದ ಯಾವ ಪ್ರಯೋಜನವೂ ಇಲ್ಲ. ಜೀವಕ್ಕೆ ಜೀವ ಕೊಡುವ ಬಂಧನವಿದ್ದು ಬರೀ ಸುಳ್ಳು ಹೇಳಿದರೆ ಅಥವಾ ಮುಖವಾಡ ಹಾಕಿ ಬದುಕಿದರೆ ಪ್ರಯೋಜನವೇನು !? ಬಂಧನವು ಉಳಿವುದೇನು ? ಅನಗತ್ಯವಾದ ವಿನಯವಾದರೂ ಏಕೆ ? ವಿನವಿರಬೇಕೇನೋ ನಿಜ. ಆದರೆ ಅತಿವಿನಯವಿರುವು ಅಸಹ್ಯ ತರುತ್ತದೆ. ಋಜುತ್ವ , ನೇರನಡೆ ಸತ್ಯ, ವಸ್ತುನಿಷ್ಠತೆ ಬದುಕಿನಲ್ಲಿ ಇದ್ದಾಗ ಅತಿವಿನಯವಾದರೂ ಏಕೆ !? ವಿದ್ಯಾದದಾತಿ ವಿನಯಂ ಎಬ ಮಾತು ಎಷ್ಟು ಸತ್ಯವೋ ಅತಿವಿನಯಂ ದೂರ್ತ ಲಕ್ಷಣಂ ಎಂಬ ಮಾತೂ ಸಹ ಅಕ್ಷರಶಃ ಸತ್ಯವೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021