ಕನ್ನಡಿಯ ಬಿಂಬವನು ಕಂಡು ಸಂತಸಗೊಂಡು
ತನ್ನದದುಮೆಂದು ಬಲು ಮೋದಗೊಳ್ಳುವುದೆ!?
ನಿನ್ನ ಬಿಂಬವ ಕಾಣು ಜಗದ ಕನ್ನಡಿಯೊಳಗೆ
ನಿನ್ನ ಬದುಕಿನ ಬಿಂಬ ಜಾಣಮೂರ್ಖ //
ಕನ್ನಡಿಯ ಮುಂದೆ ನಿಂತು ಅದರಲ್ಲಿ ಮೂಡುವ ನಮ್ಮ ಪ್ರತಿಬಿಂಬವನ್ನು ಕಂಡು ನಾವೆಷ್ಟು ಸಂತಸಪಡುತ್ತೇವೆ !? ಅದು ತನ್ನದೆಂಬ ಭ್ರಮೆಯಲ್ಲಿ ಬಲು ಸಂತಸಗೊಳ್ಳುತ್ತೇವೆ. ಮಿಥ್ಯವಾದುದಕ್ಕೇ ಇಷ್ಟೊಂದು ಸಂತಸಗೊಂಡ ನಾವು ಇನ್ನು ಸತ್ಯ ತಿಳಿದರೆ ಏನಾಗಬಹುದು! ಅಲ್ಲವೇ ? ಅದಕ್ಕೆ ಆ ದಿವ್ಯ ಸತ್ಯವನ್ನು ಕಾಣೊದಕ್ಕೆ ಜಗತ್ತೆಂಬ ಕನ್ನಡಿಯನ್ನು ನೋಡಯ್ಯ ಗೆಳೆಯ ! ಅದು ನಿನ್ನ ಬಿಂಬವಲ್ಲ ! ನಿನ್ನ ಬದುಕಿನ ಬಿಂಬ ! ನಿನ್ನವರ ಬದುಕಿನ ಬಿಂಬ ! ಎತ್ತ ಕಡೆಯಾದರೂ ನೋಡು , ಅಖಂಡ ಸತ್ಯದ ಸಾಕ್ಷಾತ್ಕಾರ ! ಏನು ವ್ಯತ್ಯಾಸವಿದೆ ಅವರ ಬಿಂಬಕ್ಕೂ , ನಿನ್ನ ಬಿಂಬಕ್ಕೂ ! ಈಗ ಸರಿಯಾಗಿ ನೋಡಿ ಆಲೋಚಿಸಿ ಹೇಳಯ್ಯ ಗೆಳೆಯಾ !? ನೈಜ ಸತ್ಯದ ಅನಾವರಣ. ಈಗಲೂ ವ್ಯಾಕುಲಗೊಂಡು ದುಃಖದಲ್ಲೇ ಬಿದ್ದರೆ ಅದಕ್ಕೆ ಹೊಣೆಯಾರು ?! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021