ಅಂಬುಧಿಯ ಮಂಥನದೊಳಿಂದ್ರನೈರಾವತಕೆ
ಶಂಭು ಚಂದಿರನಂತೆ ಹರಿ ಲಕುಮಿಗೊಲಿಯೆ !
ಕುಂಭದಮೃತವ ಬಯಸೆ ವಿಷವುದಿಸಿತೈ ಬಿಡದೆ
ತುಂಬಿದೀ ಬದುಕಂತೆ ಜಾಣಮೂರ್ಖ //
ಸಮುದ್ರ ಮಥನ ಕಾಲದಲ್ಲಿ ಸುರರರಸು ಇಂದ್ರನು ಐರಾವತ ಬೇಕೆಂದರೆ , ಚಂದ್ರನನ್ನು ಶಿವನು ತನಗಿರಲೆಂದು ಚಂದ್ರನನ್ನು ಧರಿಸಿ ಚಂದ್ರಧರನಾದನು. ಶ್ರೀಹರಿಯು ಸಾಕ್ಷಾತ್ ಲಕ್ಷ್ಮೀ ದೇವಿಯನ್ನೇ ಸತಿಯಾಗಿ ಪಡೆದನು. ಸುರಾಸುರರು ಅಮೃತವನ್ನು ಬಯಸಿದರು. ಧನ್ವಂತರಿಯು ಅಮೃತವನ್ನು ತಂದರು ಇತ್ಯಾದಿ ಕಥೆಯೆಲ್ಲವೂ ಎಲ್ಲರಿಗೂ ಗೊತ್ತು. ಆದರೆ ಸೂಕ್ಷ್ಮವೇನೆಂದರೆ ಹಾಲಾಹಲವು ಉದಿಸಿದುದು. ಇವೆಲ್ಲಾ ಐಶಾರಾಮಿ ದಿವ್ಯತ್ವಪೂರಿತವಾದವುಗಳ ನಂತರ ಕೊನೆಯಲ್ಲಿ ಹುಟ್ಟಿದುದು ವಿಷ ! ಇದುನ್ನು ಬದುಕಿಗೆ ಸುಂದರವಾಗಿ ಸಮನ್ವಯಿಸಬಹುದು. ಹೆಚ್ಚು ಆಸೆಪಟ್ಟರೆ ನಂತರ ದುಃಖ ಕಟ್ಟಿಟ್ಟ ಬುತ್ತಿ. ಭಗವಂತನ ಸೃಷ್ಟಿಯಲ್ಲಿ ಎಲ್ಲವೂ ಇದೆ. ಬೇಕಾದುದು ಸಿಗುತ್ತದೆ. ಆದರೆ ಅತಿಯಾಸೆ ಪಟ್ಟರೆ ಸುಖವೆಂತೋ ಅಂತೆ ದುಃಖವೂ ಸಿಗುತ್ತದೆ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021