ಕಹಿಯೇಕೆ ಹೃದಯದೊಳು ಸಿಹಿಯಾಗು ಮನಸಿನಿಂ
ಕಹಿಕಳೆದ ಬಾಳದುವೆ ದಿವ್ಯ ನಂದನವೊ !
ಸಿಹಿಯುಂಡರೆಲ್ಲರುಂ ಪಿಂತೆ ಕಹಿ ಕಳೆಯುತಲಿ
ಕಹಿಕಳೆದು ಸಿಹಿಯಾಗೊ ಜಾಣಮೂರ್ಖ //
ಹೃದಯದ ಕಹಿಯನ್ನು ಕಳೆದರಾಯ್ತು. ನಾವು ಸಿಹಿಯಾಗಿಬಿಡುತ್ತೇವೆ. ಮನಸ್ಸಿನಲ್ಲಿ ಅಂತಹುದೊಂದು ಸಂಕಲ್ಪ ಮಾಡಿಕೊಳ್ಳ ಬೇಕಷ್ಟೆ. ಹಿಂದೆಲ್ಲಾ ಜೀವನದ ಕಹಿಯನ್ನು ಬಿಟ್ಟು ಸಿಹಿಯಾಗಿಸಿ ನಲಿದ ಹಲವು ಪುರಾಣ ಪುರುಷರು ನಮಗೆ ಆದರ್ಶವಾಗಿಲ್ಲವೇ !? ಅವರ ಬದುಕನ್ನೊಮ್ಮೆ ಪ್ರೀತಿಯಿಂದ ಸಿಂಹಾವಲೋಕನ ಮಾಡಿದರಾಯ್ತು. ಬದುಕಿನ ಸಿಹಿಯ, ಶಾಂತಿಯ ದಾರಿ ತಾನಾಗೇ ದೊರೆಯುತ್ತದೆ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021