ಶ್ರುತ ಸೋಮಕಾದಿಗಳ ಕಡಿದನಶ್ವತ್ಥಾಮ
ಮೃತಶೋಕ ಮರೆಮಾಡಿ ಕ್ಷಮಿಸಿದಳು ಕೃಷ್ಣೆ !
ಹತಭಾಗ್ಯೆ ಪಾಂಚಾಲಿ ಮೆರೆಯೆ ತಾಯ್ಪ್ರೇಮ ಭಾ
ರತದಿ ಮೆರೆಯಿತೊ ಕರುಣೆ ಜಾಣಮೂರ್ಖ//
ಅಶ್ವತ್ಥಾಮ ಗುರುಪುತ್ರ. ಮಹಾ ಪರಾಕ್ರಮಶಾಲಿ. ಪಾಂಡವರೆಂದು ಭಾವಿಸಿ ಪಾಂಡವಸೂನುಗಳಾದ ಶ್ರುತಸೋಮಕ , ಪ್ರತಿವಿಂಧ್ಯ, ಶ್ರುತಕೀರ್ತಿ , ಶತಾನೀಕ ಹಾಗೂ ಶ್ರುತಸೇನರೆಂಬುವರನ್ನು ಸೇಡಿನಿಂದ ಕತ್ತರಿಸಿ ಹಾಕುತ್ತಾನೆ. ಇದು ಪಾಂಡವರಿಗೆ ತಿಳಿಯುತ್ತದೆ. ಕೋಪ ಜಾಜ್ವಲ್ಯಮಾನ ಪ್ರಕಾಶದಿಂದ ಸಿಡಿದೆದ್ದ ಅವರನ್ನು ತಾಯಿ ದ್ರೌಪದಿ ತಡೆಯುತ್ತಾಳೆ.ಅವಳ ಮಾತೃಹೃದಯ ಮಿಡಿಯುತ್ತದೆ. ಅಜ್ಞಾನದಿಂದ ಅಶ್ವತ್ಥಾಮ ಈ ಅಕಾರ್ಯ ಗೈದಿದ್ದಾನೆ. ನನ್ನ ಮಕ್ಕಳನ್ನು ಕಳೆದುಕೊಂಡು ಈ ತಾಯಿಹೃದಯ ಛಿದ್ರಗೊಂಡಿದೆ. ಆದರೆ ಇದಕ್ಕಾಗಿ ಅಶ್ವತ್ಥಾಮನನ್ನು ಕೊಂದರೆ ಸತ್ತ ನನ್ನ ಮಕ್ಕಳು ಹಿಂದಿರುಗಿ ಬರುವುದಿಲ್ಲ. ನಾಪಟ್ಟ ವೇದನೆ ಅವನ ತಾಯಿಯೂ ಅನುಭವಿಸುವುದು ಬೇಡ. ಅವನನ್ನು ಕ್ಷಮಿಸಿಬಿಡಿ ಎನ್ನುತ್ತಾಳೆ ಆ ತಾಯಿ. ಎಂತಹಾ ಕ್ಷಮಾಗುಣ ! ಎಂತಹಾ ಕರುಣೆ ! ಇದೇ ನಮ್ಮ ಭಾರತದ ಮಣ್ಣಿನ ಗುಣ , ಮಾತೆಯರ ಆದರ್ಶ. ಅದಕ್ಕೇ ನಮ್ಮ ಸನಾತನಧರ್ಮ , ಸಂಸ್ಕೃತಿ ಇಂದಿಗೂ ಚಿರ ನೂತನ ! ಚಿರ ಚೇತನ! ಅದು ಎಂದೆಂದಿಗೂ ಅಮರ!! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021