ನಾ ಓಡಲ?
ಇಲ್ಲ
ನಿಂತು
ನೋಡಲ?
ಭಾನ ಅಪ್ಪಿ
ಭೂತಾಕರದಿ ನಿಂತ
ಕಾರ್ಮೋಡ
ಭುವಿಯನೆತ್ತಿ
ಭಾನಿಗೆಸೆಯುವ ಆತುರದಿರುವ
ಕುಳಿರ್ಗಾಳಿ
ನಿಂತಿಹುದು
ವಿಶ್ವಾಸ ಛೇಧಿಸುವ
ಬಲದಿ
ಅರಿವಿರಲಿ
ಕಾರ್ಮೋಡ ಸುರಿದೀತು
ಬೊಗಸೆ ನೀರ
ಕುಳಿರ್ಗಾಳಿ ಮುರಿದೀತು
ಒಂದೆರಡು ಕೊಂಬೆಯ
ಎಣಿಸಲಾಗದ
ತೊಡಕ ನೋಡಿದ
ನಿಕಾಯ
ಅಂಜಿಕೆ ಬೇಡ
ಅರೆಕ್ಷಣದ
ವಿಪತ್ತಿಯ
ಛಲವಿರಲಿ ನಿಂತು
ನೋಡುವ
ಭಯವಿರದಿರಲಿ
ಹಿಮ್ಮುಖ ಓಡುವ!
Latest posts by rmakkithaya (see all)
- ಸ್ಪೂರ್ತಿ! - July 12, 2021
- ಛಲ! - May 9, 2021
- ಮೊಗ್ಗಾಗುವ ಆಸೆ! - April 11, 2021